ಉಡುಪಿ: ತಲವಾರು ಬೀಸಿ ಹಲ್ಲೆಗೆ ಯತ್ನಿಸಿದ್ದ ಮೂವರ ಬಂಧನ

ಉಡುಪಿ: ಜೂನ್ 15 ರಂದು ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ಆರೋಪಿಗಳಾದ ಪ್ರವೀಣ, ಅಭಿ ಕಟಪಾಡಿ, ದೇಶರಾಜ್‌ ಮತ್ತು ಇತರರು ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ಚರಣ್‌ರಾಜ್‌ ಹಾಗೂ ಸ್ನೇಹಿತರಿಗೆ ಕೊಲ್ಲುವ ಉದ್ದೇಶದಿಂದ ತಲವಾರನ್ನು ಬೀಸಿದ್ದು, ಬಿಯರ್‌ ಬಾಟಲಿಗಳನ್ನು ಸಹಾ ಬಿಸಾಡಿ ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾರೆ.

ಚರಣ್‌ರಾಜ್‌ ಹಾಗೂ ಸ್ನೇಹಿತರು ತಾವು ಬಂದಿದ್ದ ಮೋಟಾರ್‌ ಸೈಕಲ್‌ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಓಡಿ ಹೋಗಿರುತ್ತಾರೆ.

ಆರೋಪಿಗಳು ಚರಣ್‌ರಾಜ್‌ ಮತ್ತು ಸ್ನೇಹಿತು ಬಿಟ್ಟು ಹೋಗಿರುವ ಮೋಟಾರ್‌ ಸೈಕಲ್‌ಗೆ ಹಾನಿ ಮಾಡಿದ್ದು, ಸ್ಕೂಟಿಯನ್ನು ಅಲ್ಲೇ ದೂಡಿ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯ ಅಪರಾದ ಕ್ರಮಾಂಕ 108/2024 ಕಲಂ: 143,148,427,307 r/w 149 IPCಮತ್ತು 27 Arms act ರಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಪ್ರವೀಣ್‌(22), ಬಡಗುಬೆಟ್ಟು, ಅಭಿಷೇಕ್‌(28), ಕಟಪಾಡಿ ಮತ್ತು ದೇಶ್ ರಾಜ್(18) ಪುತ್ತೂರು ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನೊಬ್ಬ ಕಾನೂನು ಸಂಘರ್ಷಕ್ಕೋಳಗಾದ ಬಾಲಕನನ್ನು ವಿಚಾರಣೆ ನಡೆಸಿ ಕಾನೂನಿನಂತೆ ಕ್ರಮ ಜರುಗಿಸಲಾಗಿರುತ್ತದೆ. ಪ್ರಕರಣ ತನಿಖೆಯಲ್ಲಿದೆ ಎಂದು‌ ಪೊಲೀಸ್ ಪ್ರಕಟಣೆ ತಿಳಿಸಿದೆ.

Latest Indian news

Popular Stories