ಉಡುಪಿ: ಜಿಲ್ಲೆಯಲ್ಲಿ ಆನ್ಲೈನ್ ಖದೀಮರ ಜಾಲಾಕ್ಕೆ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾಗರಿಕರು ಆನ್ಲೈನ್ ಲಿಂಕ್ ಅಥವಾ ಸುಳ್ಳು ಬೆದರಿಕೆಗಳನ್ನು ನಂಬಿ ಲಕ್ಷದಿಂದ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣದಲ್ಲಿ ಒರ್ವರು 1.33 ಕೋಟಿ ಮತ್ತು ಇನ್ನೋರ್ವ ವ್ಯಕ್ತಿ 33 ಲಕ್ಷ ರೂಪಾಯಿಯನ್ನು ಆನ್ಲೈನ್ ಜಾಲಾಕ್ಕೆ ಸಿಲುಕಿ ಕಳೆದುಕೊಂಡಿದ್ದಾರೆ.
ಅರುಣ್ ಕುಮಾರ್ (53) , ಉಡುಪಿ ಇವರಿಗೆ ದಿನಾಂಕ:29.07.2024 ರಂದು ಮೊಬೈಲ್ ನಂಬ್ರ +919232037584 ನೇ ನಂಬ್ರದಿಂದ ಅಪರಿಚಿತರು ಕರೆಮಾಡಿ ಕಸ್ಟಮ್ಸ್ ನಿಂದ ಕರೆಮಾಡುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ FedEx ಕೊರಿಯರ್ ನಲ್ಲಿ 5 ಪಾಸ್‌ಪೋರ್ಟ್, 5 ಎ.ಟಿ.ಎಮ್ ಕಾರ್ಡ್, 200 ಗ್ರಾಂ ಎಂ.ಡಿ.ಎಮ್.ಎ ಹಾಗೂ 5000 USD ಇದ್ದು ಸದ್ರಿ ಕೋರಿಯರ್ ಪ್ರಸ್ತುತ ಮುಂಬಯಿ ಕಸ್ಟಮ್ಸ್ ರವರ ವಶದಲ್ಲಿ ಇರುವುದಾಗಿ ತಿಳಿಸಿರುತ್ತಾರೆ. ಸದ್ರಿ ಕೋರಿಯರ್ ತಾನು ಮಾಡಿಲ್ಲವಾಗಿ ತಿಳಿಸಿದಾಗ ಅಪರಿಚಿತ ವ್ಯಕ್ತಿ ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೈನ್ ಮುಖೇನಾ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಸದ್ರಿ ಹಾಟ್‌ಲೈನ್ ನಲ್ಲಿ ಪೊಲೀಸ್ ಅಧಿಕಾರಿ ಎಂದು ನಂಬಿಸಿ ನಿಮ್ಮ ಆಧಾರ್ ಕಾರ್ಡ್ ನ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿ ನಮ್ಮ ಕೇಂದ್ರ ಕಚೇರಿಗೆ ಕರೆಯನ್ನು ಫಾರ್ವಡ್ ಮಾಡುವುದಾಗಿ ತಿಳಿಸಿ ನಂತರದಲ್ಲಿ ಉಡುಪಿಯ ವೈದ್ಯರಿಗೆ ಮುಂಬೈ ಕಸ್ಟಮ್ ಹೆಸರಿನಲ್ಲಿ 1.33ಕೋಟಿ ರೂ. ವಂಚನೆಉಡುಪಿ: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್(53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್ನಲ್ಲಿ 5 ಪಾಸ್ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್ರವರ ವಶದಲ್ಲಿ ಇರುವುದಾಗಿ ತಿಳಿಸಿದರು.ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸ ಲಾಗಿದೆ ಎಂದು ತಿಳಿಸಿದರು. ನಿಮ್ಮ ಆಧಾರ್ ಕಾರ್ಡ್ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು.ಜು..29ರಿಂದ ಆ.9ರ ತನಕ ಅವರ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದರು.ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ಖಾತೆಯಿಂದ ಆ.6ರಿಂದ ಆ.9ರತನಕ ಹಂತ ಹಂತವಾಗಿ ಒಟ್ಟು 1,33,81,000ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಲಾಗಿದೆ
ಎರಡನೇ ಪ್ರಕರಣ:
ದಿನಾಂಕ 24/06/2024 ರಂದು ಪ್ರಕರಣದ ಸಂತ್ರಸ್ಥ ಉಪೇಂದ್ರ (72) ಇವರನ್ನು ಯಾರೋ ಅಪರಿಚಿತ ವ್ಯಕ್ತಿಗಳು Whats App ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರವೇಟ್ ವೇಲ್ತ್ ಮ್ಯಾನೇಜ್ಮೆಂಟ್ ಗ್ರೂಪ್ ಸೇರಿಸಿದ್ದು, ಮೋತಿಲಾಲ್ ಒಸ್ವಾಲ್ ಪ್ರಾವಟ್ ವೇಲ್ತ್ ಮ್ಯಾನೇಜ್ಮೆಂಟ್ ಗ್ರೂಪ್ ನ VIP-203-845 ಎಂಬ ಅಕೌಂಟ್ ನ್ನು ನೀಡಿರುತ್ತಾರೆ.
Whats App ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ 04/07/2024 ರಿಂದ ದಿನಾಂಕ 24/07/2024 ರ ತನಕ ಹಂತ ಹಂತವಾಗಿ ಒಟ್ಟು 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದು ತದನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2024 ಕಲಂ: 66(C) 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.