ಉಡುಪಿ: ಅಧಿಕ ಲಾಭಾಂಶದ ಆಸೆಯಲ್ಲಿ ಸಂತ್ರಸ್ಥರೊಬ್ಬರು ಆನ್ಲೈನ್ ವಂಚನೆಗೆ ಬಲಿ ಬಿದ್ದು 46 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಕುಂದಾಪುರದ ಬಿದ್ಕಲ್ ಕಟ್ಟೆ ನಿವಾಸಿ ಸಂತ್ರಸ್ಥ ಅವಿನಾಶ್ (48) ಇವರು , ದಿನಾಂಕ 17/09/2024 ರಂದು ತನ್ನ ಮೊಬೈಲ್ ಗೆ “Surendra VIP free bull stock Sharing Group-X98” ಎಂಬ ವಾಟ್ಸಪ್ ಗ್ರೂಪ್‌ಗೆ 7005841479 ನೇ ಮೊಬೈಲ್ ನಂಬ್ರನಿಂದ ಸೇರ್ಪಡೆ ಮಾಡಿದ್ದಾರೆ. ಅದರಲ್ಲಿ ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿ ಲಾಭಂಶ ಪಡೆಯುವಂತೆ ತಿಳಿಸಲಾಗಿದೆ.
ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅವರು ತಿಳಿಸಿದಂತೆ Zerodha ಎಂಬ D-mat account ಖಾತೆ ತೆರೆದಿದ್ದು, ಅದರಲ್ಲಿ10,000/- ಹೂಡಿಕೆ ಮಾಡಿದ್ದು, ಬಳಿಕ EMCEE – invest Group Inc ಎಂಬ D-mat account ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದಂತೆ ಸಂತ್ರಸ್ಥರು ಅವರ ಬ್ಯಾಂಕ್ ಆಫ್ ಬರೋಡಾ ಖಾತೆ ನಂಬ್ರ 74020100004725 ನಿಂದ ಗೂಗಲ್ ಪೇ ಮತ್ತು ಆನ್‌ಲೈನ್ ಇಂಟರ್ ನೆಟ್ ಬ್ಯಾಂಕಿಂಗ್ ಮುಖಾಂತರ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 46,92,000/- ಜಮೆ ಮಾಡಿಸಿಕೊಂಡಿದ್ದಾರೆ.
ಈವರೆಗೆ ಜಮೆ ಮಾಡಿದ ಹಣವನ್ನು ವಾಪಾಸು ನೀಡದೇ, ಲಾಭಾಂಶವನ್ನು ಕೊಡದೇ ಪಿರ್ಯಾದಿದಾರರಿಗೆ ನಷ್ಟವನ್ನುಂಟು ಮಾಡಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 83/2024 ಕಲಂ : 66(ಸಿ) 66 (ಡಿ) ಐ.ಟಿ. ಆಕ್ಟ್., 318(4) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.