ಉಡುಪಿ, ಅ.05; ಚಲಿಸುತ್ತಿರುವ ರೈಲಿನಲ್ಲಿ ರಕ್ತ ವಾಂತಿಮಾಡಿಕೊಂಡು ಅಸ್ವಸ್ಥ ಸ್ಥಿತಿಯಲ್ಲಿದ್ದ ಪ್ರಯಾಣಿಕನನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ರೈಲ್ವೆ ವೈದ್ಯಾಧಿಕಾರಿ ಡಾ. ಸ್ಟಿವನ್ ಜಾರ್ಜ್ ಪ್ರಯಾಣಿಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸಮಾಜಸೇವಕ ನಿತ್ಯಾನಂದ ಒಳಕಾಡುವರ ಮೂಲಕ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸುವ ವ್ಯವಸ್ಥೆಗೊಳಿಸಿದರು.
ರೈಲ್ವೆ ಆರ್.ಪಿ.ಎಫ್ ಪೋಲಿಸರು ಸಹಕರಿಸಿದರು.
ರಕ್ಷಿಸಲ್ಪಟ್ಟ ಪ್ರಯಾಣಿಕ ಅನಿಲ್ ಕೆ (19ವ) ಕೇರಳದಿಂದ ಪನ್ವೆಲಿಗೆ ಪ್ರಯಾಣಿಸುತ್ತಿದ್ದನೆಂದು ತಿಳಿದುಬಂದಿದೆ.