ಜೈಪುರದಲ್ಲಿ ₹ 6 ಕೋಟಿಗೆ ₹ 300 ಮೌಲ್ಯದ ನಕಲಿ ಆಭರಣ ಖರೀದಿಸಿದ ಅಮೆರಿಕ ಮಹಿಳೆ!

ಜೈಪುರ/ದೆಹಲಿ: ಅಮೆರಿಕದ ಮಹಿಳೆಯೊಬ್ಬರು ₹ 300 ಮೌಲ್ಯದ ಕೃತಕ ಆಭರಣಗಳನ್ನು ₹ 6 ಕೋಟಿಗೆ ಖರೀದಿಸಿದ್ದಾರೆ. ರಾಜಸ್ಥಾನದ ಅಂಗಡಿಯವರು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಅಮೆರಿಕದ ಪ್ರಜೆಯಾದ ಚೆರಿಶ್ ಅವರು ಚಿನ್ನದ ಪಾಲಿಶ್ ಇರುವ ಬೆಳ್ಳಿ ಆಭರಣಗಳನ್ನು ಖರೀದಿಸಿದ್ದಾರೆ.

ಈ ವರ್ಷ ಏಪ್ರಿಲ್‌ನಲ್ಲಿ ಯುಎಸ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಆಭರಣಗಳನ್ನು ಪ್ರದರ್ಶಿಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ. ಚೆರಿಶ್ ಭಾರತಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿಯನ್ನು ಈ ಕುರಿತು ವಿಚಾರಿಸಿದ್ದಾರೆ.

ಅಂಗಡಿ ಮಾಲೀಕರು ತನ್ನ ಆರೋಪಗಳನ್ನು ತಳ್ಳಿಹಾಕಿದ ನಂತರ, ಯುಎಸ್ ಮಹಿಳೆ ಜೈಪುರದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರು ಯುಎಸ್ ರಾಯಭಾರ ಕಚೇರಿಯಿಂದ ಸಹಾಯವನ್ನು ಕೋರಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ.

2022 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಗೌರವ್ ಸೋನಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಕಳೆದ ಎರಡು ವರ್ಷಗಳಲ್ಲಿ ಕೃತಕ ಆಭರಣಗಳಿಗಾಗಿ ಅವಳು ₹ 6 ಕೋಟಿ ಪಾವತಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Latest Indian news

Popular Stories