ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಕೆ: ಕ್ಷಮೆಯಾಚಿಸಿದ ಸುವರ್ಣ ನ್ಯೂಸ್

ಬೆಂಗಳೂರು: ಭಾರತದ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ ಏಷ್ಯಾ ನೆಟ್ ಸುವರ್ಣ ನ್ಯೂಸ್ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ‘ಕಣ್ತಪ್ಪಿನಿಂದ’ ತಪ್ಪಾಗಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಕುರಿತ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ನಿರ್ವಹಿಸುತ್ತಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಭಾರತದ ಧ್ವಜ ಹಿಂದೂಳಿಗೆ ರೂಪಕವಾಗಿ ಮತ್ತು ಪಾಕಿಸ್ತಾನದ ಧ್ವಜ ಮುಸ್ಲಿಮರಿಗೆ ರೂಪಕವಾಗಿ ಬಳಸಿತ್ತು.

ಇದೀಗ ಸುವರ್ಣ ನ್ಯೂಸ್ ಕಣ್ತಪ್ಪಿನಿಂದ ಹೀಗಾಗಿದೆಯೆಂದು ಕ್ಷಮೆಯಾಚಿಸಿದೆ. ಸುವರ್ಣ ನ್ಯೂಸ್ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Latest Indian news

Popular Stories