ಉತ್ತರಾಖಂಡದ ಸುರಂಗ ಮಾರ್ಗದಿಂದ ಕಾರ್ಮಿಕರನ್ನು ಹೊರತರಲು ಪ್ರಮುಖ ಪಾತ್ರ ವಹಿಸಿದ ರ಼್ಯಾಟ್ ಮೈನರ್ ತಂಡದ ನಾಯಕ ವಕೀಲ್ ಹಸನ್ ಮತ್ತು ಮುನ್ನಾ ಖುರೇಷಿ ಹೇಳಿದ್ದೇನು?

ಟೀಮ್ ಲೀಡರ್ ವಕೀಲ್ ಹಾಸನ್ ಮತ್ತು ರ಼್ಯಾಟ್ ಮೈನರ್ ಮುನ್ನಾ ಖುರೇಷಿ ನೇತೃತ್ವದ ದೆಹಲಿ ಮೂಲದ ರಕ್ಷಣಾ ತಂಡವು ಉತ್ತರಾಖಂಡದ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ಯಶಸ್ವಿಯಾಗಿ ತಲುಪಿ‌ ಅವರನ್ನು ರಕ್ಷಿಸಿದೆ. ಈ ಮೂಲಕ ಸುಮಾರು 17 ದಿನದ ಕಾರ್ಮಿಕರ ಸಂಕಷ್ಟಕ್ಕೆ ತೆರೆ ಎಳೆದಿದೆ.

ಕಾರ್ಯಾಚರಣೆಯ ಹೀರೋ ಮುನ್ನಾ ಖುರೇಷಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, “ನಾನು ಕೊನೆಯ ಬಂಡೆಯನ್ನು ತೆಗೆದಿದ್ದೆ. ನಾನು ಅವರನ್ನು ನೋಡಿದೆ. ನಂತರ ನಾನು ಅವರಿದ್ದ ಕಡೆಗೆ ಹೋದೆ. ನನ್ನನ್ನು ತಬ್ಬಿಕೊಂಡರು. ನಮ್ಮನ್ನು ಎತ್ತಿದರು ಮತ್ತು ಹೊರತೆಗೆದಿದ್ದಕ್ಕಾಗಿ ನಮಗೆ ಧನ್ಯವಾದ ಹೇಳಿದರು. ನಾವು ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಕೆಲಸ ಮಾಡಿದೆವು.ನನ್ನ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ನಾನು ಅದನ್ನು ನನ್ನ ದೇಶಕ್ಕಾಗಿ ಮಾಡಿದ್ದೇನೆ” ಎಂದರು.

ದೆಹಲಿ ತಂಡದ ಅವಿರತ ಪ್ರಯತ್ನಗಳಿಂದ ಕಾರ್ಮಿಕರಿಗೆ ಮರು ಜೀವ ನೀಡಿದಂತಾಗಿದೆ. ಈ ಕಾರ್ಯಚರಣೆಯಲ್ಲಿ ಅವರ ಕೌಶಲ್ಯ ಮತ್ತು ಶೌರ್ಯ ಮೆಚ್ಚುವಂತದ್ದು. ಪ್ರತಿಕೂಲ ಪರಿಸ್ಥಿತಿಯಲ್ಲೂ ಏಕತೆ ಮತ್ತು ಅತ್ಯಂತ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ಅಂತಿಮ 18 ಮೀಟರ್ ಅಗೆದ ರ಼್ಯಾಟ್ ಮೈನರ್ ತಂಡದ ನಾಯಕ ವಕೀಲ್ ಹಾಸನ್, “ನಾವು 28 ಗಂಟೆಗಳಲ್ಲಿ ಅಗೆಯುವ ಕೆಲಸವನ್ನು ಪೂರ್ಣಗೊಳಿಸಿದ್ದೇವೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Latest Indian news

Popular Stories