ಅಲಹಾಬಾದ್: ವಾರಣಾಸಿಯಲ್ಲಿ ಹಿಂದೂ ಅರ್ಜಿದಾರರಿಗೆ ಬುಧವಾರ ಮಧ್ಯಾಹ್ನ ನಗರದ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅನುಮತಿ ನೀಡಿತು.ಅದನ್ನು ಈ ಮೊದಲು ಸೀಲ್ ಮಾಡಲಾಗಿತ್ತು.
ವಿಶ್ವನಾಥ ದೇಗುಲದ ಅರ್ಚಕರು ಮಸೀದಿಯಲ್ಲಿ ಪ್ರಾರ್ಥನೆ ನಡೆಸಬಹುದು ಎಂದು ಹೇಳಿರುವ ನ್ಯಾಯಾಲಯ,ಪುರಾತತ್ವ ಇಲಾಖೆಯ ಸರ್ವೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಿಂದ ಮೊಹರು ಹಾಕಲು ಆದೇಶಿಸಿದ್ದ ಮಸೀದಿಯ ನೆಲಮಾಳಿಗೆಯ ಪ್ರವೇಶವನ್ನು ತಡೆಯುವ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಆದೇಶಿಸಿದೆ.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ