ಬಿಹಾರದ ನಳಂದ ಜಿಲ್ಲೆಯ ಬಿಹಾರ ಷರೀಫ್‌ನಲ್ಲಿ ನಡೆದ ರಾಮ್ ನವಮಿ ಹಿಂಸಾಚಾರದ ಸಂದರ್ಭದಲ್ಲಿ ಇಮ್ತಿಯಾಜ್ ತನ್ನ ಜೀವನೋಪಾಯದ ಮೂಲವನ್ನು ಕಳೆದುಕೊಂಡಿದ್ದಾರೆ.
ಅವರೇ ಹೇಳುವ ಪ್ರಕಾರ ಹಿಂದುತ್ವವಾದಿಗಳು ಅವರ ಮೇಲೆ ಹೊಡೆಯುತ್ತಿರುವಾಗ, ತನ್ನ ಮಕ್ಕಳಾದ ಅಯತ್ ಮತ್ತು ರೆಹನ್ ಸಲುವಾಗಿ ತನ್ನ ಪ್ರಾಣವನ್ನು ಉಳಿಸಬೇಕೆಂದು ತನ್ನ ದೇವರಲ್ಲಿ ಪ್ರಾರ್ಥಿಸಿದ್ದಾರೆ.ಅವರ ಇ-ರಿಕ್ಷಾ ದಾಳಿಕೋರರಿಂದ ಹಾನಿಗೊಳಗಾಗಿದೆ. ಅದರ ಮೂಲಕ ಅವರು ಮಾರಾಟ ಮಾಡಲು ತರಕಾರಿಗಳನ್ನು ಖರೀದಿಸುತ್ತಿದ್ದರು. ಮೈಲ್ಸ್ 2 ಸ್ಮೈಲ್ ಫೌಂಡೇಶನ್ ಒಂದು ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸುವ ಮೂಲಕ ಸಹಾಯ ಮಾಡಿದೆ.ಇದರಿಂದಾಗಿ ಅವರು ಮತ್ತೆ ಬದುಕು ಕಟ್ಟಿ ಕೊಳ್ಳಲು ಸಹಾಯವಾಗಲಿದೆ.
Miles2Smile ಎಂಬುದು ದೆಹಲಿ ಮೂಲದ ಸಂಶೋಧನಾ ವಿದ್ವಾಂಸ ಮತ್ತು ಪತ್ರಕರ್ತ ಆಸಿಫ್ ಮುಜ್ತಾಬಾ ಅವರು ಸ್ಥಾಪಿಸಿದ ಲಾಭರಹಿತ ಸಂಸ್ಥೆಯಾಗಿದೆ ಮತ್ತು ಹಿಂಸಾಚಾರದ ಸಂತ್ರಸ್ತರ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಬಿಹಾರ ಷರೀಫ್‌ನಲ್ಲಿ ರಾಮ ನವಮಿ ಹಿಂಸಾಚಾರದ ಸಂತ್ರಸ್ತರಿಗಾಗಿ ಕಾರ್ಯನಿರ್ವಹಿಸುತ್ತಿದೆ.