ರಘುಪತಿ ಭಟ್ ಬಂಡಾಯವಾಗಿ ಸ್ಪರ್ಧಿಸಲ್ಲ ಎಂಬ ವಿಶ್ವಾಸ ಇದೆ: ಡಾ.ಧನಂಜಯ ಸರ್ಜಿ

ಉಡುಪಿ, ಮೇ 14: ಮಾಜಿ ಶಾಸಕ ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಬಂಡಾಯವಾಗಿ ಸ್ಪರ್ಧಿಸುವ ನಿಲುವು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ಇದೆ. ಮತ್ತೆ ಅವರು ಪಕ್ಷದ ಜೊತೆ ಸೇರಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ರಘುಪತಿ ಭಟ್ ಅವರ ಬಗ್ಗೆ ಬಹಳ ಗೌರವ ಇದೆ. ಅವರು ಪಕ್ಷ ನಿಷ್ಠೆಯಿಂದ ನಡೆದುಕೊಂಡು ಬಂದವರು. ಅವರೊಂದಿಗೆ ಪಕ್ಷದ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದರು.

ಸಂಘಪರಿವಾರದ ವಿರುದ್ಧ ಚಳವಳಿ ನಡೆಸಿದ್ದಾರೆಂಬ ರಘುಪತಿ ಭಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸರ್ಜಿ, ನಾನು ಆರ್ಎಸ್ಎಸ್ ವಿರುದ್ಧ ಯಾವುದೇ ಚಳವಳಿ ಮಾಡಿಲ್ಲ. ನಾನು ಆರ್ಎಸ್ಎಸ್ನ ನಿಷ್ಟಾವಂತ ಸ್ವಯಂ ಸೇವಕ ನಾಗಿದ್ದೇನೆ. ಶಿವಮೊಗ್ಗದ ಗಲಭೆಗೆ ಸಂಬಂಧಿಸಿ ಎಲ್ಲ ಧರ್ಮಗಳ ಗುರುಗಳು ಸೇರಿ ಶಾಂತಿಗಾಗಿ ನಡೆಸಿದ ಮೆರವಣಿಗೆಯಲ್ಲಿ ನಾನು ಭಾಗವಹಿಸಿದ್ದೇನೆ ಹೊರತು ಯಾವುದೇ ಸಂಘಟನೆಯ ವಿರುದ್ಧ ಅಲ್ಲ ಎಂದು ಸ್ಪಷ್ಟ ಪಡಿಸಿದರು

Latest Indian news

Popular Stories