ಯುಕೆ: ಶುಕ್ರವಾರದಂದು ನರ್ಸ್ ಲೂಸಿ ಲೆಟ್ಬಿ ಏಳು ಶಿಶುಗಳನ್ನು ಹತ್ಯೆ ಮಾಡಿದ ಆರೋಪ ಮತ್ತು ಆರು ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ. ಅವಳನ್ನು ಯುಕೆ ಇತಿಹಾಸದಲ್ಲಿ ಅತ್ಯಂತ ಕೆಟ್ಟ ವೈದ್ಯಕೀಯ ಸರಣಿ ಕೊಲೆಗಾರರಲ್ಲಿ ಒಬ್ಬಳೆಂದು ಉಲ್ಲೇಖಿಸಲಾಗಿದೆ. ಆಕೆ ಕೊನೆಯದಾಗಿ ಒಂದು ದಿನದ ಶಿಶುವನ್ನು ಹತ್ಯೆ ಮಾಡಿದ್ದಳು.
ಆಕೆ ಕೆಲಸ ಮಾಡುತ್ತಿದ್ದ ಸ್ಥಳ (ಚಿತ್ರ)
33-ವರ್ಷ-ವಯಸ್ಸಿನ ಹಂತಕಿ ಲೂಸಿ ಕೃತ್ಯದ ಕುರಿತು ಸೂಕ್ತ ಕಾರಣ ನೀಡಿಲ್ಲ. ಆದರೆ 10-ತಿಂಗಳ ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್‌ನಿಂದ ನ್ಯಾಯಾಧೀಶರಿಗೆ ಹಲವಾರು ಸಂಭಾವ್ಯ ಉದ್ದೇಶಗಳನ್ನು ವಿವರಿಸಲಾಗಿದೆ.
ಈಕೆ ಮಕ್ಕಳಿಗೆ ನೋವಾಗುವಾಗ ಆನಂದಿಸುತ್ತಿದ್ದಳು ಎಂಬ ವಿಚಾರ ಕೂಡ ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಿದೆ. ಇನ್ನು ಆಕೆಯ ಮನೆ ತಪಾಸಣೆ ನಡೆಸಿದಾಗ ಆಕೆಯ ಮನೆಯಲ್ಲಿ ತಪಾಸಣೆ ನಡೆಸಿದಾಗ, ಪೊಲೀಸರು ಆಸ್ಪತ್ರೆಯ ದಾಖಲೆಗಳನ್ನು ಮತ್ತು ಲೆಟ್ಬಿ ಬರೆದ ಕೈಬರಹದ ಟಿಪ್ಪಣಿ ಸಿಕ್ಕಿದ್ದು ಅದರಲ್ಲಿ “ನಾನು ದುಷ್ಟೆ, ನಾನು ಇದನ್ನು ಮಾಡಿದ್ದೇನೆ” ಎಂದು ಬರೆದುಕೊಂಡಿದ್ದಾಳೆ.
ಲೂಸಿ ವಿವಾಹಿತ ವೈದ್ಯರೊಬ್ಬರನ್ನು ರಹಸ್ಯವಾಗಿ ಪ್ರೀತಿಸುತ್ತಿದ್ದು ಮಕ್ಕಳಿಗೆ ಸಮಸ್ಯೆಯಾದಾಗ ವೈದ್ಯರನ್ನು ಶೀಘ್ರ ಸಂಪರ್ಕಿಸಲು ಈ ರೀತಿಯ ಕೃತ್ಯ ಎಸಗುತ್ತಿದ್ದಳು ಎಂಬ ಅಂಶ ಕೂಡ ವಿಚಾರಣೆಯಲ್ಲಿ ಬಹಿರಂಗವಾಗಿದ್ದು ಇದೀಗ ಈ ಕೃತ್ಯವೂ ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿದೆ.
ಶಿಶುಗಳ ಕೊಲ್ಲಲು ಲೆಟ್ಬಿ ವಿವಿಧ ವಿಧಾನಗಳನ್ನು ಬಳಸಿದ್ದಾಳೆ ಎಂಬುದಕ್ಕೆ ಪುರಾವೆಗಳನ್ನು ನ್ಯಾಯಾಲಯಕ್ಕೆ ಮಂಡಿಸಲಾಗಿದೆ. ರಕ್ತ ನಾಳಕ್ಕೆ ಗಾಳಿ ಮತ್ತು ಇನ್ಸುಲಿನ್ ಚುಚ್ಚುಮದ್ದು ಸೇರಿದಂತೆ; ಅವರ ಜೀರ್ಣಾಂಗವ್ಯೂಹದೊಳಗೆ ಗಾಳಿಯ ದ್ರಾವಣ; ಹಾಲು ಅಥವಾ ದ್ರವಗಳ ಮಿತಿಮೀರಿದ ಪ್ರಮಾಣವನ್ನು ಬಲವಂತವಾಗಿ ತಿನ್ನಿಸಿ ಕೊಂದಿದ್ದಾಳೆ. ಒಟ್ಟಿನಲ್ಲಿ ಒರ್ವ ಸರಣಿ ಹಂತಕಿಯನ್ನು ಯುಕೆ ವ್ಯವಸ್ಥೆ ಬಂಧಿಸಿ ಹಲವು ಮಕ್ಕಳನ್ನು ರಕ್ಷಿಸಿದೆ.
ಸಿಕ್ಕ ದಾಖಲೆ (ಚಿತ್ರ)