ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಚಟುವಟಿಕೆ ಪೂರ್ಣ ಗೊಳ್ಳಲು ಎರಡೂ ವರೆ ತಿಂಗಳು ಅವದಿ ಸಲ್ಲುತ್ತದೆ. ಚುನಾವಣಾ ಆಯೋಗದ ಈ ನಡೆಯು ಅನುಮಾನಾಸ್ಪದವಾಗಿದೆ. ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಅವರು ಮಾತನಾಡುತ್ತಾ, ಇದು ಅಕ್ರಮ ನಡೆಸಲು ಅವಕಾಶ ನೀಡಿದಂತಾಗುತ್ತದೆ. ಈಗಾಗಲೇ ಇವಿಎಂ ಬಗ್ಗೆ ಜನರಲ್ಲಿ ಅನುಮಾನವಿದೆ.ಫಲಿತಾಂಶಗಳನ್ನು ಆಧುನಿಕ ತಂತ್ರಜ್ಞಾನದ ಮುಖಾಂತರ ಬದಲಿಸಲಾಗುತ್ತಿದೆ. ಎಂಬ ಸಂಶಯ ಜನರಲ್ಲಿದೆ. ತ್ವರಿತ ಗತಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿ ಎಂದು ಇವಿಎಂ ಬಳಸಲಾಗುತ್ತದೆ. ಎಂಬ ಸಮಜಾಯಿಷಿ ನೀಡುತ್ತಾರೆ. ಇಷ್ಟು ಸಮಯ ತಗಲುವುದಾದರೆ ಬ್ಯಾಲೆಟ್ ಪೇಪರ್ ಉತ್ತಮ ವಲ್ಲವೇ ? ಈ ನಡುವೆ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳು ಒಟ್ಟಿಗೆ ನಡೆಸಲು ಕೇಂದ್ರ ತಯಾರಿ ನಡೆಸುತ್ತಿದೆ. ಅದನ್ನು ಹೇಗೆ ನಡೆಸುತ್ತಾರೆಯೋ?
ಹೆಚ್ಚು ಅವಧಿ ತೆಗೆದುಕೊಂಡ ಬಗ್ಗೆ ವಿಚಾರಿಸಿದಾಗ ಭಾರತ ಬಹು ವಿಸ್ತಾರವಾದ ದೇಶ ಇಷ್ಟು ಸಮಯಾವಕಾಶ ಬೇಕು ಎಂದು ಆಯೋಗ ತನ್ನ ಕ್ರಮ ಸಮರ್ಥಿಸಿದೆ. ಈ ಸಮರ್ಥನೆ ಒಪ್ಪಲಾಗದು. ಯಾಕೆಂದರೆ ಸಮರ್ಪಕವಾಗಿ ಚುನಾವಣೆ ನಡೆಸುವ ಸೇನಾ ಸಾಮರ್ಥ್ಯ ನಮ್ಮಲ್ಲಿಲ್ಲವೇ? ಎಂದು ಅವರು ಹೇಳಿದರು.