ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಅವರು “ಅತ್ಯಂತ ಪ್ರಮುಖ” ಭಾಷಣ ಮಾಡಲಿದ್ದಾರೆ – ಕಾಂಗ್ರೆಸ್

ನವ ದೆಹಲಿ:ಲೋಕಸಭೆಯಲ್ಲಿ ಮಂಗಳವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಅವರು “ಅತ್ಯಂತ ಪ್ರಮುಖ” ಭಾಷಣ ಮಾಡುತ್ತಾರೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರು ಹೇಳಿದ್ದಾರೆ.

ಇದೀಗ ಅವರ ಸಂಸತ್ ಸದಸ್ಯತ್ವ ಮರು ಸ್ಥಾಪನೆಯಾಗಿದ್ಧು ಕಾಂಗ್ರೆಸ್ ಪಾಳಾಯಕ್ಕೆ ಬಲ ಬಂದಿದೆ. ರಾಹುಲ್ ಗಾಂಧಿ ಆಗಮನದಿಂದ ಬಿಜೆಪಿ ಪಾಳಾಯಕ್ಕೆ ಮತ್ತೆ ತಲೆನೋವು ಎದುರಾಗಿದೆ.

ಎಲ್ಲಾ ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ಮಾತನಾಡಬೇಕೆಂದು ಬಯಸುತ್ತಾರೆ. ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಈ ವಿಷಯದ ಬಗ್ಗೆ ಯಾವ ನಾಯಕರು ಮಾತನಾಡುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು.

“ರಾಹುಲ್ ಗಾಂಧಿ ಜೂನ್ 29 ರಂದು ಮಣಿಪುರಕ್ಕೆ ಹೋಗಿದ್ದರು.ರಾಜ್ಯಪಾಲರನ್ನು ಭೇಟಿ ಮಾಡಿದರು ಮತ್ತು ಜನರ ಕುಂದುಕೊರತೆಗಳು ಅವರಿಗೆ ತಿಳಿದಿದೆ” ಎಂದು ಟ್ಯಾಗೋರ್ ಹೇಳಿದರು.

Latest Indian news

Popular Stories