ಕನ್ನಡ ಚಿತ್ರರಂಗದಲ್ಲಿ ಮಹಿಳಾ ಸುರಕ್ಷತೆ: ಸಿಎಂ ಭೇಟಿಯಾದ ನಟಿ ಸಂಜನಾ ಗಲ್ರಾನಿ

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರು ಗುರುವಾರ(ಸೆ 5) ರಂದು ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು ಭೇಟಿ ಮಾಡಿ ಕನ್ನಡ ಚಿತ್ರರಂಗದಲ್ಲಿ (Sandalwood ) ಕೆಲಸ ಮಾಡುತ್ತಿರುವವರ ಸುರಕ್ಷತೆಗಾಗಿ ಸಂಘ ರಚಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮಾಲಿವುಡ್‌(Mollywood) ಸಿನಿಮಾರಂಗದಲ್ಲಿ ಹೇಮಾ ಸಮಿತಿ ವರದಿ(Hema Committee Report) ಬಳಿಕ ದಿಗ್ಗಜ ಕಲಾವಿದರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಭಾರೀ ಸಡ್ಡು ಮಾಡುತ್ತಿರುವ ಬೆನ್ನಲ್ಲೇ ಟಾಲಿವುಡ್‌, ಕಾಲಿವುಡ್‌ ಹಾಗೂ ಸ್ಯಾಂಡಲ್‌ ವುಡ್‌ನ ಕೆಲ ಕಲಾವಿದರು ಕೂಡ ಹೇಮಾ ಸಮಿತಿಯಂತೆ ತಮ್ಮ ಚಿತ್ರರಂಗದಲ್ಲೂ ಒಂದು ಸಮಿತಿ ರಚನೆ ಆಗಬೇಕೆಂದು ಒಂದಾಗಿ ಧ್ವನಿಗೂಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸಮಿತಿ ರಚನೆ ಆಗಬೇಕೆಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ(ಫೈರ್)‌ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದೆ.

Latest Indian news

Popular Stories