ಬೆಂಗಳೂರಿನಲ್ಲಿ ‘ವಿಶ್ವ ಕಾಫಿ ಸಮ್ಮೇಳನ’; ರೋಹನ್ ಬೋಪಣ್ಣ ರಾಯಭಾರಿ

ಬೆಂಗಳೂರು: ಬೆಂಗಳೂರಿನಲ್ಲಿ ಐದನೇ ‘ವಿಶ್ವ ಕಾಫಿ ಸಮ್ಮೇಳನ’ ನಡೆಯಲಿದ್ದು, ರೋಹನ್ ಬೋಪಣ್ಣ ರಾಯಭಾರಿಯಾಗಿದ್ದಾರೆ.

ಭಾರತವು ಇದೇ ಮೊದಲ ಬಾರಿಗೆ ‘ವಿಶ್ವ ಕಾಫಿ ಸಮ್ಮೇಳನ’ವನ್ನು (ಡಬ್ಲ್ಯುಸಿಸಿ) ಆಯೋಜಿಸುತ್ತಿದ್ದು, ಅದರ ಐದನೇ ಆವೃತ್ತಿಯನ್ನು ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆಯು (ಐಸಿಒ) ಬೆಂಗಳೂರಿನಲ್ಲಿ ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 28 ರವರೆಗೆ ಆಯೋಜಿಸುತ್ತಿದೆ.

ಬೆಂಗಳೂರಿನಲ್ಲಿ ಇಂದು ನಡೆದ ಡಬ್ಲ್ಯುಸಿಸಿ 2023ರ ಪೂರ್ವವೀಕ್ಷಣೆ ಸಮಾರಂಭದಲ್ಲಿ ಕಾರ್ಯಕ್ರಮದ ಲೋಗೋವನ್ನು ಸೋಮವಾರ ಅನಾವರಣಗೊಳಿಸಲಾಯಿತು. ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಮತ್ತು ಕಾರ್ಯದರ್ಶಿ ಕೆ ಜಿ ಜಗದೀಶ ಘೋಷಿಸಿದರು.

Latest Indian news

Popular Stories