ಹಾಸನದಲ್ಲಿ ಪಶ್ಚಿಮ ಘಟ್ಟದ ಕಾಡಿಗೆ ಆಕಸ್ಮಿಕ ಬೆಂಕಿ: ನಂದಿಸಲು ತೆರಳಿದ್ದ ನಾಲ್ವರು ಅರಣ್ಯ ಸಿಬ್ಬಂದಿಗಳಿಗೆ ಗಾಯ

ಹಾಸನ: ಜಿಲ್ಲೆಯ ಪಶ್ಚಿಮ ಘಟ್ಟದ ಕಾಡಿಗೆ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ನಂದಿಸೋದಕ್ಕೆ ತೆರಳಿದ್ದಂತ ನಾಲ್ವರು ಅರಣ್ಯ ಸಿಬ್ಬಂದಿಗಳಿಗೆ ಸುಟ್ಟಗಾಯಗಳಾಗಿರೋದಾಗಿ ತಿಳಿದು ಬಂದಿದೆ.

ಹೌದು ಹಾಸನ ತಾಲೂಕಿನ ಕಾಡುಮನೆ ಮಣಿಬೀಡು ದೇವಸ್ಥಾನದ ಸಮೀಪದ ಪಶ್ಚಿಮ ಘಟ್ಟಕ್ಕೆ ಬೆಂಕಿ ಬಿದ್ದಿತ್ತು.

ಇದನ್ನು ನಂದಿಸೋದಕ್ಕೆ ಅರಣ್ಯ ಇಲಾಖೆಯ ಮಂಜುನಾಥ್, ಅರಣ್ಯ ರಕ್ಷಕ ಸುಂದರೇಶ್, ತುಂಗೇಶ್ ಹಾಗೂ ಮಹೇಶ್ ತೆರಳಿದ್ದರು.

ಬೆಂಕಿಯ ಕೆನ್ನಾಲಿಗೆ ಹೆಚ್ಚಾದಾಗ, ಮಂಜುನಾಥ್ ಹಾಗೂ ಸುಂದರೇಶ್ ಸಿಕ್ಕು ಗಂಭೀರಗಾಯಗೊಂಡಿದ್ದಾರೆ. ತುಂಗೇಶ್ ಹಾಗೂ ಮಹೇಶ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದಂತ ಮಂಜುನಾಥ್, ಸುಂದರೇಶ್ ಅನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ.

Latest Indian news

Popular Stories