ಹಾಸನ : ಹಾಸನದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಪತಿ ಶವದ ಮುಂದೆ ಅಳುತ್ತ ಪತ್ನಿ ಪ್ರಾಣಬಿಟ್ಟ ಘಟನೆ ಬೇಲೂರು ತಾಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರವೀಶ್ ( 39) ಪ್ರಮೀಳಾ (32) ಎಂದು ಗುರುತಿಸಲಾಗಿದೆ.
ಇಂದು ಪತಿಯ ಶವದ ಮುಂದೆ ಗೋಳಾಡುತ್ತಾ ಪ್ರಮೀಳಾ ಕೂಡ ಮೃತಪಟ್ಟಿದ್ದಾರೆ, ತಂದೆ ತಾಯಿಯರನ್ನು ಕಳೆದುಕೊಂಡು ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ರವೀಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಗಂಡನ ಸಾವನ್ನು ಅರಗಿಸಿಕೊಳ್ಳಲಾಗದ ಪತ್ನಿ ಪ್ರಮೀಳಾ ಪತಿ ಶವದ ಮುಂದೆಯೇ ಅಳುತ್ತಾ ಮೃತಪಟ್ಟಿದ್ದಾರೆ.
ತಂದೆ ತಾಯಿಯರನ್ನು ಕಳೆದುಕೊಂಡು ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಬೇಲೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ