ಶಿರಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಮರ: ಮಂಗಳೂರು-ಬೆಂಗಳೂರು ನಡುವೆ ಸಂಚಾರ ಬಂದ್

ಹಾಸನ: ಕಳೆದ ರಾತ್ರಿಯಿಂದ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಮಾರ್ಗದಲ್ಲಿ ರಸ್ತೆಗೆ ಅಡ್ಡವಾಗಿ ಮರ ಉರುಳಿಬಿದ್ದು ವಾಹನ ಸಂಚಾರ ಬಂದ್ ಆಗಿದೆ.

ಭಾರಿ ಗಾಳಿ ಸಹಿತ ತಿಂಗಳುಗಳ ನಂತರ ಬಿರುಸಿನ‌ ಮಳೆ ಸುರಿದಿದೆ.ಪರಿಣಾಮ ಮರ ಉರುಳಿದ್ದು ವಾಹನಗಳು ಸಂಚಾರ ಮಾಡಲು ಆಗದ ಸ್ಥಿತಿ ಬಂದಿದೆ.

ಅರಣ್ಯ, ಹೆದ್ದಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮರ ತೆರವಿಗೆ ಯತ್ನ ಆರಂಭಿಸಿದ್ದಾರೆ. ಎರಡು ಗಂಟೆಗೂ ಹೆಚ್ಚುಕಾಲ ವಾಹನಗಳಲ್ಲೆ ಸಿಲುಕಿರುವ ಪ್ರಯಾಣಿಕರು ಪರದಾಡುವಂತಾಗಿದೆ.

Latest Indian news

Popular Stories