Hassan
ಪಲ್ಟಿಯಾಗಿ ತೋಟಕ್ಕೆ ಬಿದ್ದ ಕಾರು: ತಂದೆ ಸ್ಥಳದಲ್ಲೇ ದುರ್ಮರಣ; ಮಗಳ ಸ್ಥಿತಿ ಗಂಭೀರ

ಹಾಸನ: ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾರೊಂದು ತೋಟಕ್ಕೆ ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಗಂಭಿರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊರಟಗೆರೆಯಲ್ಲಿ ನಡೆದಿದೆ.
ತಂದೆ ದಯಾನಂದ (46) ಮೃತರು. ದಯಾನಂದ್ ಮಗಳು ನಿಶ್ಮಿತಾ (16) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ದನಾನಂಡ್ ಬೇಲೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು. ಚಿಕ್ಕಮಗಳೂರಿಗೆ ತೆರಳಿದ್ದ ಅವರು ಮಗಳೊಂದಿಗೆ ಕಾರಿನಲ್ಲಿ ವಾಪಾಸ್ ಆಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಡಿಕೆ ತೋಟಕ್ಕೆ ಬಿದ್ದು ದುರಂತ ಸಂಭವಿಸಿದೆ.ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.