ಹಾಸನ: ಗ್ರಹಿಣಿ ಒಬ್ಬಳು ಅನುಮಾನವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ನಾಗಯ್ಯಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಸುರಭಿ (26) ಎಂದು ಹೇಳಲಾಗುತ್ತಿದ್ದು ಇದೀಗ ಪೋಷಕರು ಪತಿಯೇ ಮಗಳಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಾರೆ.
ಎರಡು ವರ್ಷದ ಹಿಂದೆ ದರ್ಶನ ಎನ್ನುವರು ಜೊತೆಗೆ ಮೈಸೂರು ಮೂಲದ ಸುರಭಿ ಅವರ ವಿವಾಹವಾಗಿತ್ತು. ನೆನ್ನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೂಡಲೇ ಪತಿ ದರ್ಶನ್ ನಿಮ್ಮ ಮಗಳು ಲೋ ಬಿಪಿಯಾಗಿ ಸಾವನಪ್ಪಿದ್ದಾಳೆ ಎಂದು ಸುರಭಿ ಪತಿ ದರ್ಶನ್ ಪೋಷಕರಿಗೆ ತಿಳಿಸಿದ್ದಾನೆ.ಇದೀಗ ಪೋಷಕರು ಅತಿ ದರ್ಶನಿಗೆ ಬೇರೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಹೀಗಾಗಿ ನಮ್ಮ ಮಗಳನ್ನು ಪತಿಯೇ ಕೊಲೆ ಮಾಡಿದ್ದಾನೆಂದು ಇದೀಗ ಸುರಭಿ ಪೋಷಕರು ಆರೋಪಿಸುತ್ತಿದ್ದಾರೆ.
ಇದೀಗ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸುತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಸುರಭಿ ಮೃತದೇಹವನ್ನು ಇದೀಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರವಣಬೆಳಗೊಳದಲ್ಲಿ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ