ಹಾವೇರಿಯಲ್ಲಿ ‘ಬ್ಯಾಡಗಿ ಮೆಣಸಿನಕಾಯಿ ಬೆಲೆ’ ಕುಸಿತ: ರೈತರಿಂದ ಮಾರುಕಟ್ಟೆಯಲ್ಲಿ ‘ಕಲ್ಲುತೂರಾಟ’

ಹಾವೇರಿ: ಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನ ಕಾಯಿ ಬೆಲೆ ಕುಸಿತಗೊಂಡ ಪರಿಣಾಮ, ರೈತರು ತಮ್ಮ ಕಿಚ್ಚು ಹೊರ ಹಾಕಿದ್ದಾರೆ. ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿರುವಂತ ರೈತರು, ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಒಣಮೆಣಿಸಿನ ಕಾಯಿ ಬೆಲೆ ಕುಸಿತಗೊಂಡ ಪರಿಣಾಮ ರೈತರ ಆಕ್ರೋಶದ ಕಿಚ್ಚಿನ ಕಟ್ಟೆ ಹೊಡೆದಿದೆ.

ಬ್ಯಾಡಗಿ ಮೆಣಸಿನ ಕಾಯಿಯ ಬೆಲೆ ಕುಸಿತಗೊಂಡ ಪರಿಣಾಮ, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಎಪಿಎಂಸಿಯಲ್ಲಿನ ಅಧಿಕಾರಿಗಳ ಕಾರಿಗೂ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ವಾರ ಪ್ರತಿ ಕ್ವಿಂಟಾಲ್ ಗೆ ಬ್ಯಾಡಗಿ ಮೆಣಸಿನ ಕಾಯಿಯ ಬೆಲೆ 20 ಸಾವಿರ ಇತ್ತು. ಈಗ ಕ್ವಿಂಟಾಲ್ ಗೆ 12 ಸಾವಿರಕ್ಕೆ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯ ಮೇಲೆ ಕಲ್ಲು ತೂರಾಟವನ್ನು ಮಾಡಿದ್ದಾರೆ.

Latest Indian news

Popular Stories