ಆನ್‌ಲೈನ್‌ ಗೇಮ್‌ ನಲ್ಲಿ ಹಣ ಕಳೆದುಕೊಂಡಿದ್ದ ವಿದ್ಯಾರ್ಥಿ ನೇಣಿಗೆ ಶರಣು

ಹುಬ್ಬಳ್ಳಿ: ಆನ್‌ಲೈನ್‌ ಗೇಮ್‌ ನಲ್ಲಿ ಹಣ ಕಳೆದುಕೊಂಡಿದ್ದ ವಿಜಯಪುರ ಜಿಲ್ಲೆ ಮೂಲದ ಇಂಜನಿಯರಿಂಗ್ ವಿದ್ಯಾರ್ಥಿಯೊಬ್ಬ ಬುಧವಾರ ತಡರಾತ್ರಿ ತಾನು ವಾಸಿಸುತ್ತಿದ್ದ ಇಲ್ಲಿನ ಶಿರಡಿ ನಗರದ ಬಿಸಿಎಂ ಹಾಸ್ಟೆಲ್‌ನ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ.

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ರಾಕೇಶ ಶ್ರೀಶೈಲ ಜಂಬಲದಿನ್ನಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಇಲ್ಲಿನ ವಿದ್ಯಾನಗರ ಬಿವಿಬಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಇ ಆಯಂಡ್ ಸಿ ವಿಭಾಗದಲ್ಲಿ 6ನೇ ಸೆಮಿಸ್ಟರ್ ಓದುತ್ತಿದ್ದ ಈತನು ಆನ್‌ಲೈನ್‌ ಗೇಮ್‌ ವ್ಯಾಮೋಹಕ್ಕೊಳಗಾಗಿದ್ದ.‌ ಇದರಲ್ಲಿ ಒಂದಿಷ್ಟು ಹಣ ಕೂಡ ಕಳೆದುಕೊಂಡಿದ್ದ. ಇದರಿಂದ ಮನನೊಂದು ಕೊಠಡಿಯಲ್ಲಿನ ಫ್ಯಾನ್‌ ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮತ್ತು ಅಶೋಕ ನಗರ ಇನ್ಸ್‌ಪೆಕ್ಟರ್, ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಯುವಕನ ಪಾಲಕರು ಹಾಸ್ಟೆಲ್‌ಗೆ ಆಗಮಿಸಿದ್ದಾರೆ.

Latest Indian news

Popular Stories