ಹುಬ್ಬಳ್ಳಿಯಲ್ಲಿ ಫ್ಲೈಓವರ್​ ಕಾಮಗಾರಿ ವೇಳೆ ‘ASI’ ಸಾವು ಪ್ರಕರಣ:11 ಜನರ ಬಂಧನ!

ಹುಬ್ಬಳ್ಳಿ : ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸರ್ಕಾರಿ ಅಧಿಕಾರಿಯೋರ್ವರು ಫ್ಲೈ ಓವರ್ ಕಾಮಗಾರಿಗೆ ಸಾವನ್ನಪ್ಪಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರು ಹುಬ್ಬಳ್ಳಿ ಪೊಲೀಸರು ಇದೀಗ ಮಹಾರಾಷ್ಟ್ರ ಮೂಲದ ಝಂಡು ಕನ್​ಸ್ಟ್ರಕ್ಷನ್ ಎಂಬ ಕಂಪನಿಯ 11 ಜನ ನೌಕರರನ್ನು ಬಂಧಿಸಿದ್ದಾರೆ

ಕಳೆದ ಮಂಗಳವಾರ ASI ನಾಭಿರಾಜ್ ಕರ್ತವ್ಯಕ್ಕೆ ಹೋಗುವಾಗ ಈ ವೇಳೆ ಕಾಮಗಾರಿಯ ರಾಡ್ ಬಿದ್ದು ತಲೆಗೆ ಗಂಭೀರವಾದಂತ ಗಾಯವಾಗಿತ್ತು. ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್​ಐ ನಾಭಿರಾಜ್ ದಯಣ್ಣವರ (59) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಇದೀಗ ಮಹಾರಾಷ್ಟ್ರ ಮೂಲದ ಝಂಡು ಕನ್​ಸ್ಟ್ರಕ್ಷನ್ ಕಂಪನಿಯ 11 ಜನ ನೌಕರರನ್ನು ಬಂಧಿಸಿದ್ದಾರೆ.

ಝಂಡು ಕನ್​ಸ್ಟ್ರಕ್ಷನ್​ ಸೂಪರ್ ವೈಸರ್​ ಹರ್ಷ ಹೊಸಗಾಣಿಗೇರ, ಲೈಸನಿಂಗ್ ಇಂಜಿನಿಯರ್ ಜಿತೇಂದ್ರ ಪಾಲ್, ಇಂಜನಿಯರ್ ಭೂಪೇಂದರ್, ನೌಕರರಾದ ಮಹಮ್ಮದ್ ಮಿಯಾ, ಅಸ್ಲಂ, ಮೊಹಮ್ಮದ್ ಹಾಜಿ, ಸಬೀಬ್, ರಿಜಾವುಲ್, ಶಮೀಮ್ ಅಲಿಯಾಸ್ ಪಿಂಟು ಶೇಕ್, ಮೊಹಮ್ಮದ್ ಆರೀಫ್ ಹಾಗೂ ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಬಿವುಲ್ ಹಕ್ ಬಂಧಿತರು.

Latest Indian news

Popular Stories