ದರ್ಶನ್‌ ಪ್ರಕರಣ: ಸಿನಿಮಾ ನಟನಾಗಿ ಒಬ್ಬರ ಜೀವನ ಹಾಳು ಮಾಡ್ತೀದಿರಿ ಅಂದ್ರೆ ಇದು ಅಪರಾಧ, ಶೆಟ್ಟರ್

ಹುಬ್ಬಳ್ಳಿ(ಜೂ.16): ಗ್ಯಾರಂಟಿ ಯೋಜನೆ ಜಾರಿ ತರಲು ರಾಜ್ಯ ಸರ್ಕಾರದ ಖಜಾನೆ ಬಹುತೇಕ ಹಣ ಖರ್ಚಾಗುತ್ತದೆ. ದಿನನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಇವತ್ತು ಜನ ಸಾಮಾನ್ಯರ ಜೇಬಿಗೆ ಕೈ ಹಾಕೋ ಕೆಲಸ ಆಗಿದೆ. ನೀವು ಈ ರೀತಿ ಬೆಲೆ ಏರಿಕೆ ಮಾಡೋ ಬದಲು ಗ್ಯಾರಂಟಿ ನಿಲ್ಲಿಸಬಹುದು.

ತಕ್ಷಣ ಬೆಲೆ ಏರಿಕೆ ವಾಪಸ್ ಪಡಿಬೇಕು. ಇಲ್ಲದಿದ್ದರೆ ಜನ‌ ರೊಚ್ಚಿಗೆದ್ದು ದಂಗೆ ಏಳೋ ಪರಸ್ಥಿತಿ ಬರತ್ತದೆ. ಬೆಲೆ ಏರಿಕೆ ವಾಪಸ್ ಪಡೆಯದೆ ಹೋದ್ರೆ ಬಿಜೆಪಿ ಹೋರಾಟ ಮಾಡತ್ತೆ. ನಾಳೆ ರಾಜ್ಯಾದ್ಯಂತ ನಮ್ಮ ರಾಜ್ಯಾಧ್ಯಕ್ಷರು ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ. ನಮ್ಮ ಕರ್ನಾಟಕ ಜನ ಬೇರೆ ರಾಜ್ಯಕ್ಕೆ ಹೋಗಿ ಪೆಟ್ರೋಲ್ ಡಿಸೇಲ್ ತರೋ ಕೆಲಸ ಆಗತ್ತೆ. ಖಜಾನೆ ಖಾಲಿಯಾಗಿ ಮುಂದೆ ಸರ್ಕಾರಿ ನೌಕರಿ ಮಾಡೋರಿಗೆ ಸಂಬಳ ಕೊಡೋಕೆ ಆಗಲ್ಲ. ಬಹಳ‌ ಅನುಭವಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ವಾಸ್ತವವನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರ ಮೇಲೆ ರಾಜ್ಯ ಸರ್ಕಾರ ಷಡ್ಯಂತ್ರ ಮಾಡಿದೆ. ಗೃಹ ಸಚಿವರೇ ಅದನ್ನು ಗಂಭೀರವಾಗಿ ತಗೆದುಕೊಳ್ಳಬಾರದು ಎಂದು ಹೇಳಿದ್ರು, ನಾಗೇಂದ್ರ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಬರೋ ಹಾಗೆ ಆಯ್ತು. ಇದನ್ನು ಡೈವರ್ಟ್ ಮಾಡಲು ಯಡಿಯೂರಪ್ಪ ಅರೆಸ್ಟ್ ಮಾಡಲು ಮುಂದಾಗಿದ್ರು. ಇದು ಷಡ್ಯಂತ್ರವಾಗಿದೆ. ಇವತ್ತು ಹೈಕೋರ್ಟ್‌ನಲ್ಲಿ ‌ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ‌ನಿಂದ ದ್ವೇಷದ ರಾಜಕಾರಣ ನಡಿತೀದೆ. ದ್ವೇಷದ ರಾಜಕರಣ ನಿಲ್ಲಬೇಕು. ಯಡಿಯೂರಪ್ಪ ನವರ ಮೇಲೆ ಮಾಡಿದ ಕುತಂತ್ರ, ಅಕ್ಷಮ್ಯ ಅಪರಾಧ ಎಂದ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

Latest Indian news

Popular Stories