ಹಾಫ್ ಮೂನ್ ಬೇ (ಕ್ಯಾಲಿಫೋರ್ನಿಯಾ): ಉತ್ತರ ಕ್ಯಾಲಿಫೋರ್ನಿಯಾದ 2 ಕಡೆ ಸಂಭವಿಸಿದ ಗುಂಡಿನ ದಾಳಿಗಳಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಎಂಬಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಾಟ ನಡೆಸಿದ್ದು, ಘಟನೆಯ ಸ್ಥಳದಲ್ಲಿ ಝಾವೊ ಚುನ್‌ಲೀ ಎಂಬ ಚೈನೀಸ್- ಅಮೆರಿಕನ್ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ,
ಗುಂಡಿನ ದಾಳಿ ಎಸಗಿದವನು ಈತನೇ ಎಂದು ಸಂಶಯಿಸಲಾಗಿದೆ. ಅಣಬೆ ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚೈನೀಸ್ ಕೆಲಸಗಾರರ ಮೇಲೆ ಈತ ಗುಂಡಿನ ದಾಳಿ ನಡೆಸಿದ್ದಾನೆಂದು ತಿಳಿದುಬಂದಿದೆ.
ಎರಡು ಪ್ರತ್ಯೇಕ ಘಟನೆಗಳು ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣದ ಸಮೀಪದ ಕೃಷಿ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಮೌಂಟೇನ್ ಮಶ್ರೂಮ್ ಫಾರ್ಮ್‌ನಲ್ಲಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದು, ಓರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರೈಸ್ ಫಾರ್ಮ್‌ನಲ್ಲಿ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಾಸ್ ಏಂಜಲೀಸ್ ಬಳಿಯ ಡ್ಯಾನ್ಸ್ ಸ್ಟುಡಿಯೋದಲ್ಲಿ ಬಂದೂಕುಧಾರಿಯೊಬ್ಬ ಈ ಹಿಂದೆ ಗುಂಡಿನ ದಾಳಿ ನಡೆಸಿದ್ದ. ಈ ದಾಳಿಯಲ್ಲಿ 11 ಜನರನ್ನು ಸಾವನ್ನಪ್ಪಿದ್ದರು. ಈ ಘಟನೆ ನಡೆದು 48 ಗಂಟೆಗಳು ಕಳೆದಿದ್ದು, ಇದರ ನಡುವಲ್ಲೇ ಮತ್ತೆರಡು ದಾಳಿಗಳು ನಡೆದಿವೆ.
ಲಾಸ್ ಏಂಜಲೀಸ್ ಬಳಿಯ ಡ್ಯಾನ್ಸ್ ಸ್ಟುಡಿಯೋದಲ್ಲಿ ಬಂದೂಕುಧಾರಿಯೊಬ್ಬ 11 ಜನರನ್ನು ಹತ್ಯೆಗೈದ 48 ಗಂಟೆಗಳಲ್ಲಿಯೇ ಮತ್ತೆರಡು ದಾಳಿ ನಡೆದಿದ್ದು. ಈ ಬೆಳವಣಿಗೆಯು ಅಮೆರಿಕದ ಬಂದೂಕು ಸಂಸ್ಕೃತಿಯ ಬಗ್ಗೆ ಕಳವಳವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಳೆದ ವರ್ಷ ಅಮೆರಿಕದಲ್ಲಿ ಇದೇ ರೀತಿಯ 647 ಪ್ರಕರಣಗಳು ವರದಿಯಾಗಿವೆ.