ಪಾಕಿಸ್ಥಾನದಲ್ಲಿ ಮೊಟ್ಟಮೊದಲ ಹಿಂದು ಯುವತಿ ಆಡಳಿತ ಸೇವೆಗೆ ; ಸಹಾಯಕ ಆಯುಕ್ತರಾಗಿ ನೇಮಕ

ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವತಿ, ಸನಾ ರಾಮಚಂದ್‌ ಗುಲ್ವಾನಿ ಅವರನ್ನು ಪಂಜಾಬ್‌ ಪ್ರಾಂತ್ಯದ ಹಸನಾಬ್ದಲ್‌ನ ಸಹಾಯಕ ಆಯುಕ್ತರು ಹಾಗೂ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ನವದೆಹಲಿ, : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವತಿ, ಸನಾ ರಾಮಚಂದ್‌ ಗುಲ್ವಾನಿ ಅವರನ್ನು ಪಂಜಾಬ್‌ ಪ್ರಾಂತ್ಯದ ಹಸನಾಬ್ದಲ್‌ನ ಸಹಾಯಕ ಆಯುಕ್ತರು ಹಾಗೂ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

ಈ ಮೂಲಕ ಪಾಕಿಸ್ತಾನ ಆಡಳಿತಾತ್ಮಕ ಸೇವೆ (ಪಿಎಎಸ್‌)ಗೆ ಸೇರ್ಪಡೆಗೊಂಡ ಹಿಂದೂ ಸಮುದಾಯದ ಮೊದಲ ಸಹಾಯಕ ಆಯುಕ್ತರೆಂಬ ಖ್ಯಾತಿಗೆ ಸನಾ ಪಾತ್ರರಾಗಿದ್ದಾರೆ. ಸಿಂಧ್‌ ಪ್ರಾಂತ್ಯದ ಶಿಕಾರ್‌ಪುರ ಮೂಲದವರಾದ ಸನಾ, 2020ರಲ್ಲಿ ಕೇಂದ್ರ ಉನ್ನತ ಸೇವೆ (ಸಿಎಸ್‌ಎಸ್‌) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು‌. ಕಳೆದ ವಾರವಷ್ಟೆ ಹಸನಾಬ್ದಲ್‌ನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಸನಾ ತಮ್ಮ ಮೊದಲ ಪ್ರಯತ್ನದಲ್ಲೇ ಸಿಎಸ್‌ಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

Latest Indian news

Popular Stories