ಜಪಾನ್ ನಲ್ಲಿ 6.1 ತೀವ್ರತೆಯ ಭೂಕಂಪ, ಬೆಚ್ಚಿಬಿದ್ದ ಜಪಾನಿಗರು

ಟೋಕಿಯೊ : ಜಪಾನ ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಸೋಮವಾರ-ಮಂಗಳವಾರ ಮಧ್ಯರಾತ್ರಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಕೇಂದ್ರ ತಿಳಿಸಿದೆ.

ಭಾರತೀಯ ಕಾಲಮಾನ ಬೆಳಗ್ಗೆ 00.59ಕ್ಕೆ ಭೂಕಂಪ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದು ಇವಾಟೆ ಪ್ರಿಫೆಕ್ಚರ್ನ ಉತ್ತರ ಕರಾವಳಿ ಭಾಗವಾಗಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.

ತಕ್ಷಣದ ಹಾನಿಯ ಬಗ್ಗೆ ಯಾವುದೇ ವರದಿಗಳಿಲ್ಲ.

Latest Indian news

Popular Stories