ಪಾಕಿಸ್ತಾನದ ಅಧ್ಯಕ್ಷ’ರಾಗಿ ‘ಆಸಿಫ್ ಅಲಿ ಜರ್ದಾರಿ’ ಆಯ್ಕೆ

ಇಸ್ಲಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಮಾರ್ಚ್ 9ರ ಇಂದು ಪಾಕಿಸ್ತಾನದ 14 ನೇ ಅಧ್ಯಕ್ಷರಾಗಿ ಆಯ್ಕೆಯಾದರು.

68 ವರ್ಷದ ಜರ್ದಾರಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಜಂಟಿ ಅಭ್ಯರ್ಥಿಯಾಗಿದ್ದರೆ, ಅವರ ಪ್ರತಿಸ್ಪರ್ಧಿ ಮಹಮೂದ್ ಖಾನ್ ಅಚಕ್ಜೈ (75) ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿಯಾಗಿದ್ದರು

ಸಂವಿಧಾನದ ನಿಬಂಧನೆಗಳ ಪ್ರಕಾರ ರಾಷ್ಟ್ರೀಯ ಅಸೆಂಬ್ಲಿ ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ಎಲೆಕ್ಟೋರಲ್ ಕಾಲೇಜ್ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.

ಜರ್ದಾರಿ ಅವರು ಹತ್ಯೆಗೀಡಾದ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ. ಅವರು 255 ಮತಗಳನ್ನು ಪಡೆದರೆ, ಅವರ ಎದುರಾಳಿ 119 ಮತಗಳನ್ನು ಪಡೆದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಐದು ವರ್ಷಗಳ ಅವಧಿ ಮುಕ್ತಾಯಗೊಂಡ ಹಾಲಿ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಜರ್ದಾರಿ ತುಂಬಲಿದ್ದಾರೆ. ಆದಾಗ್ಯೂ, ಹೊಸ ಎಲೆಕ್ಟೋರಲ್ ಕಾಲೇಜ್ ಇನ್ನೂ ರಚನೆಯಾಗದ ಕಾರಣ ಅವರು ಮುಂದುವರೆದಿದ್ದಾರೆ

Latest Indian news

Popular Stories