ಸರಕು ಸಾಗಣೆ ಹಡಗು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮೂವರು ನಾಪತ್ತೆಯಾದ ಘಟನೆ ಚೀನಾದಲ್ಲಿ ಸಂಭವಿಸಿದೆ.
ಉತ್ತರ ಚೀನಾದ ಗುವಾಂಗ್ಜುನಲ್ಲಿ ಲಿಕ್ಸಿಂಶಾ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ ಸೇತುವೆಯ ಮಧ್ಯೆ ಸ್ವಲ್ಪ ಭಾಗ ಕುಸಿದುಬಿದ್ದಿದೆ.
ಸೇತುವೆ ಮೇಲೆ ಸಂಚರಿಸುತ್ತಿದ್ದ ಬಸ್ ಸೇರಿದಂತೆ 5 ವಾಹನಗಳು ಸೇತುವೆಯಲ್ಲಿ ಸಿಕ್ಕಿಬಿದ್ದಿದ್ದು, ಇಬ್ಬರು ಮೃತಪಟ್ಟು, ಮೂವರು ನಾಪತ್ತೆಯಾಗಿದ್ದಾರೆ.
ಫೋಹಾನ್ ನಿಂದ ಗುವಾಂಗ್ಜುಗೆ ತೆರಳುತ್ತಿದ್ದ ಹಡಗು ಯಾವುದೇ ಸರಕು ಸಾಗಿಸುತ್ತಿರಲಿಲ್ಲ. ಗುರುವಾರ ಮುಂಜಾನೆ 5.30ರ ಸುಮಾರಿಗೆ ಘಟನೆ ಸಂಭವಿಸಿದಾಗ ಬಸ್ ಸೇತುವೆ ಮೇಲೆ ಸಂಚರಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗು ಸೇತುವೆಗೆ ಡಿಕ್ಕಿ ಹೊಡೆದು ಸಿಕ್ಕಿ ಹಾಕಿಕೊಂಡಿದೆ. ಘಟನೆಯಲ್ಲಿ ಹಡಗಿನ ಕ್ಯಾಪ್ಟನ್ ನನ್ನು ಬಂಧಿಸಲಾಗಿದೆ. ಸೇತುವೆಯನ್ನು ಇತ್ತೀಚೆಗಷ್ಟೇ ಪುನರ್ ನವೀಕರಣ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.