ಪ್ರವಾಹ ತಡೆಯುವಲ್ಲಿ ವಿಫಲ: ಕಿಮ್ ಜಾಂಗ್ ಉನ್ ಕೆಂಗಣ್ಣಿಗೆ ಗುರಿಯಾದ 30 ಅಧಿಕಾರಿಗಳಿಗೆ ನೇಣು ಕುಣಿಕೆ!

ಉತ್ತರ ಕೊರಿಯಾದ ದೊರೆ ಕಿಮ್ ಜಾಂಗ್ ಉನ್ ಅವರ ಸರ್ವಾಧಿಕಾರಿ ಮುಖ ಮತ್ತೆ ಬಯಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ದೇಶದಲ್ಲಿ ಪ್ರವಾಹವನ್ನು ತಡೆಯಲು ವಿಫಲವಾದ 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲಾಯಿತು. ಇನ್ನೂ ಕೆಲವು ಅಧಿಕಾರಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಪ್ರವಾಹದಿಂದಾಗಿ ಇದುವರೆಗೆ 4000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಚಾಂಗಾಂಗ್ ಪ್ರಾಂತ್ಯವು ಭಾರೀ ಮಳೆ ಮತ್ತು ಭೂಕುಸಿತದಿಂದ ಅತಿ ಹೆಚ್ಚು ಸಾವುಗಳನ್ನು ಕಂಡಿದೆ.

ಸಾವಿನ ಸಂಖ್ಯೆಯನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉತ್ತರ ಕೊರಿಯಾ ಸರ್ಕಾರ ಪ್ರತಿಜ್ಞೆ ಮಾಡಿದೆ ಎಂದು ಚೋಸನ್ ಟಿವಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಇದಕ್ಕೆ ಕಾರಣರಾದವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಉತ್ತರ ಕೊರಿಯಾದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಚೋಸನ್ ಟಿವಿ ವರದಿ ಮಾಡಿದೆ. ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದ 20 ರಿಂದ 30 ಅಧಿಕಾರಿಗಳು ಒಟ್ಟಿಗೆ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

ಉತ್ತರ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ಜುಲೈನಲ್ಲಿ ಚೀನಾದ ಗಡಿಗೆ ಸಮೀಪವಿರುವ ಚಗಾಂಗ್ ಪ್ರಾಂತ್ಯದಲ್ಲಿ ವಿನಾಶಕಾರಿ ಪ್ರವಾಹದ ನಂತರ ಅಧಿಕಾರಿಗಳಿಗೆ ಕಠಿಣ ಶಿಕ್ಷೆಗೆ ಕಿಮ್ ಜೊಂಗ್ ಉನ್ ಆದೇಶಿಸಿದ್ದಾರೆ ಎಂದು ವರದಿ ಮಾಡಿದೆ. KCNA ಪ್ರಕಾರ, ಸಿನುಯಿಜುನಲ್ಲಿ ನಡೆದ ತುರ್ತು ಪಾಲಿಟ್‌ಬ್ಯೂರೋ ಸಭೆಯಲ್ಲಿ, ವಿಪತ್ತು ನಿರ್ವಹಣೆಗಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಿದವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸುವಂತೆ ಕಿಮ್ ಜಾಂಗ್ ಉನ್ ತಮ್ಮ ಅಧಿಕಾರಿಗಳಿಗೆ ಹೇಳಿದರು.

ಜುಲೈನಲ್ಲಿ, ವಾಯುವ್ಯ ಪ್ರಾಂತ್ಯದಲ್ಲಿ ತೀವ್ರವಾದ ಪ್ರವಾಹವು ಅಪ್ಪಳಿಸಿತು, ಸಾವಿರಾರು ನಿವಾಸಿಗಳು ನಿರಾಶ್ರಿತರಾಗಿದ್ದು ಹಲವರು ಮೃತಪಟ್ಟಿದ್ದರು. ದಕ್ಷಿಣ ಕೊರಿಯಾದ ಮಾಧ್ಯಮಗಳ ಪ್ರಕಾರ, ಪ್ರವಾಹದಿಂದ ಸತ್ತವರ ಸಂಖ್ಯೆ 4,000 ದಾಟಿದೆ.

Latest Indian news

Popular Stories