ಕದನ ವಿರಾಮ ಘೋಷಿಸದ ನೆತಾನ್ಯಾಹು ವಿರುದ್ಧ ಯುಎಸ್ ಅಧ್ಯಕ್ಷ ಕಿಡಿ – “ಆ್ಯಸ್…..ಲ್” ಎಂದು ಆಕ್ರೋಶ

ಖಾಸಗಿ ಸಂಭಾಷಣೆಯೊಂದರಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಇಸ್ರೇಲಿ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರನ್ನು ‘ಆಸ್***ಲ್’ ಎಂದು ಕರೆದು ಜರೆದಿರುವ ಕುರಿತು ವರದಿಯಾಗಿದೆ.

ಎನ್‌ಬಿಸಿ ನ್ಯೂಸ್‌ನ ವರದಿಯ ಪ್ರಕಾರ, ಬಿಡೆನ್, ನೆತನ್ಯಾಹು ಅವರ ಗಾಜಾ ಕಾರ್ಯಾಚರಣೆಗಳ ಬಗ್ಗೆ ಮಾತನಾಡುವಾಗ, ತಮ್ಮ ಆಕ್ರೋಶ ಹೊರಹಾಕಿದ್ದು ಅವರು (ಬಿಡೆನ್) ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಆದರೆ ನೆತನ್ಯಾಹು “ನರಕಯಾತನೆ ನೀಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ನೆತನ್ಯಾಹು ಅವರ ಗಾಜಾ ಕಾರ್ಯಾಚರಣೆಯು ‘ ನಿಲ್ಲಿಸುವ ಅಗತ್ಯವಿದೆ’ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ.

ಭಾನುವಾರ, ಸುಮಾರು 45 ನಿಮಿಷಗಳ ಸುದೀರ್ಘ ಸಂಭಾಷಣೆಯಲ್ಲಿ, ಬಿಡೆನ್ ನೆತನ್ಯಾಹು ಅವರಿಗೆ ರಫಾದಲ್ಲಿ ಆಶ್ರಯ ಪಡೆಯುತ್ತಿರುವ ಸುಮಾರು 1 ಮಿಲಿಯನ್ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ ಯೋಜನೆ ಇಲ್ಲದೆ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಬಾರದು ಎಂದು ಹೇಳಿರುವ ಕುರಿತು ಶ್ವೇತಭವನ ತಿಳಿಸಿದೆ.

Latest Indian news

Popular Stories