11 ವರ್ಷಕ್ಕೇ ಪದವಿ ಪಡೆದ ಲೌರೆಂಟ್ ಸಿಮೋನ್ಸ್

ನವದೆಹಲಿ: 11 ವರ್ಷದ ಬಾಲಕ ಲೌರೆಂಟ್ ಸಿಮೋನ್ಸ್ ಎಂಬಾತ ಪದವಿ ಪಡೆಯುವ ಮೂಲಕ ಎಲ್ಲರು ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾನೆ.
ಬೆಲ್ಜಿಯಂನ ಒಸ್ಟೆಂಡ್‌ನ ನಿವಾಸಿಯಾದ 11 ವರ್ಷದ ಲೌರೆಂಟ್ ಕೇವಲ 11 ವರ್ಷದ ಪ್ರಾಯಕ್ಕೆ ವಿಶ್ವವಿದ್ಯಾಲಯದಲ್ಲಿ ಪದವೀಧರ ಪ್ರಮಾಣ ಪತ್ರವನ್ನ ಪಡೆದಿದ್ದಾನೆ. ಈ ಮೂಲಕ ಜಗತ್ತಿನ ಎರಡನೇ ಅತೀ ಪುಟ್ಟ ಪದವೀಧರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಈ ಪುಟಾಣಿ ಬಾಲಕ ಆಂಟ್ವರ್ಪ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪದವಿಯನ್ನ ಪಡೆದಿದ್ದಾನೆ. ಸಾಮಾನ್ಯ ವಯಸ್ಸಿನ ವಿದ್ಯಾರ್ಥಿಗಳು 3 ವರ್ಷದ ವ್ಯಾಸಂಗದ ಬಳಿಕ ಡಿಗ್ರಿ ಪದವಿಯನ್ನ ಪಡೆದರೆ ಈ ಪುಟ್ಟ ಬಾಲಕ ಕೇವಲ 1 ವರ್ಷದಲ್ಲಿ ಈ ಪದವಿಯನ್ನ ಪಡೆದಿದ್ದಾನೆ.
ಅಷ್ಟು ಮಾತ್ರವಲ್ಲದೇ ಈತ 85 ಪ್ರತಿಶತ ಅಂಕವನ್ನೂ ಸಹ ಸಂಪಾದಿಸಿದ್ದಾನೆ.
ಸಿಮೋನ್ಸ್ ಅತೀ ಚಿಕ್ಕ ವಯಸ್ಸಿನಲ್ಲೇ ಪದವಿ ಪಡೆದ ಎರಡನೇ ಅತೀ ಚಿಕ್ಕ ವಯಸ್ಸಿನ ವಿದ್ಯಾರ್ಥಿಯಾಗಿದ್ದಾನೆ. 1994ರಲ್ಲಿ ಮೈಕೆಲ್ ಕೀರ್ನಿ ಎಂಬ ಬಾಲಕ ತನ್ನ 10 ವರ್ಷ ವಯಸ್ಸಿನಲ್ಲಿ ದಕ್ಷಿಣ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗದಲ್ಲಿ ಪದವಿ ಸಂಪಾದಿಸಿದ್ದ. ಸಿಮೋನ್ಸ್ ಮೈಕೆಲ್ ದಾಖಲೆಯನ್ನ ಮುರಿಯುವದರಲ್ಲೇ ಇದ್ದ. ಆದರೆ 2019ರಲ್ಲಿ ನೆದರ್‌ಲೆಂಡ್‌ನ ಐಂಡ್‌ಹೋವನ್ ವಿಶ್ವವಿದ್ಯಾಲಯವು ಈತನಿಗೆ 10 ವರ್ಷ ವಯಸ್ಸಾಗದ ಹೊರತು ಪದವಿ ವ್ಯಾಸಂಗ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಒಂದು ವರ್ಷ ಕಾಯಬೇಕಾಯಿತು.

Latest Indian news

Popular Stories

error: Content is protected !!