ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಟಾಟಾ ಬೈ ಬೈ ಸಾಧ್ಯತೆ, ನಫ್ತಾಲಿ ಬೆನೆಟ್ ಮುಂದಿನ ಪ್ರಧಾನಿ?

ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜಕೀಯ ಯುಗ ಕೊನೆಗೊಳ್ಳುವಂತಹ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ನ್ಯೂ ರೈಟ್ ಪಕ್ಷದ ಮುಖಂಡ ನಫ್ತಾಲಿ ಬೆನೆಟ್ ರವರು ನೆತನ್ಯಾಹು ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ಇದರಿಂದಾಗಿ ನೆತನ್ಯಾಹು ಸರ್ಕಾರ ಬೀಳಲಿದೆ ಎಂದು ರಾಜಕೀಯ ಶಾಸ್ತ್ರಜ್ಞರ ಅಭಿಪ್ರಾಯ.

ನಫ್ತಾಲಿ ಬೆನೆಟ್ ರ ಈ ನಿರ್ಧಾರದಿಂದಾಗಿ ಪ್ರತಿಪಕ್ಷದ ಮುಖ್ಯಸ್ಥ ಯೇರ್ ಲ್ಯಾಪಿಡ್ ರವರ ನೇತೃತ್ವದಲ್ಲಿ ಬಲಪಂತೀಯ, ಮಧ್ಯಪಂತೀಯ ಮತ್ತು ಎಡಪಂತೀಯ ಪಕ್ಷಗಳ ಒಕ್ಕೂಟದ ಸರ್ಕಾರ ರಚನೆಯಾಗಲಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಮಾರ್ಚ್ 23 ರ ರಾಷ್ಟ್ರೀಯ ಮತದಾನದಲ್ಲಿ ಮಧ್ಯಮಪಂತೀಯ ಯೆಶ್ ಅಟಿಡ್ ಪಕ್ಷದ ಮುಖ್ಯಸ್ಥ ಲ್ಯಾಪಿಡ್ ಎರಡನೇ ಸ್ಥಾನಗಳಿಸಿದ್ದರು.

ಇಸ್ರೇಲ್ ಅಧ್ಯಕ್ಷರು ಹೊಸ ಸರ್ಕಾರವನ್ನು ಘೋಷಿಸಲು ಬುಧವಾರದ ಗಡುವನ್ನು ನೀಡಬಹುದೆಂದು ಹೇಳಲಾಗುತ್ತಿದೆ.

ನಫ್ತಾಲಿ ಬೆನೆಟ್ ರವರು ದ್ವಿರಾಷ್ಟ್ರ ಸೂತ್ರದ ಕಟ್ಟಾ ವಿರೋಧಿ, ಪ್ಯಾಲೆಸ್ತೀನ್ ರಾಷ್ಟ್ರವಾದರೆ ನಮ್ಮ ಹೋರಾಟ ವ್ಯರ್ಥವೆಂಬುದು ಅವರ ವಾದ.

ಪ್ಯಾಲೆಸ್ತೀನ್ ಗೆ ಸೇರಿದ ವೆಸ್ಟ್ ಬ್ಯಾಂಕ್ ಪ್ರದೇಶದ ಇನ್ನಷ್ಟು ಪ್ರದೇಶವನ್ನು ಇಸ್ರೇಲ್ ನೊಂದಿಗೆ ಸೇರಿಸಿಕೊಳ್ಳಬೇಕೆಂಬುದು ಯೆಶ್ ಅಟಿಡ್ ಪಕ್ಷದ ಮುಖ್ಯಸ್ಥ ಲ್ಯಾಪಿಡ್ ರವರ ರಾಜಕೀಯ ಧೋರಣೆ.

ಏಪ್ರಿಲ್ 2019 ರಿಂದ ನಡೆದ ಇಲ್ಲಿಯವರೆಗೆ ನಡೆದ ನಾಲ್ಕು ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲಿಲ್ಲ. ಆದ್ದರಿಂದ ಇತರ ಪಕ್ಷಗಳ ಸಹಕಾರದೊಂದಿಗೆ ಸಮ್ಮಿಶ್ರ ಸರ್ಕಾರ ನಡೆಯುತ್ತಿತ್ತು.

ಒಂದು ವೇಳೆ ಸರ್ಕಾರ ಪತನಗೊಂಡರೆ ಕಳೆದ 12 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಜಮಿನ್ ನೆತನ್ಯಾಹು ನವರ ರಾಜಕೀಯ ಜೀವನದ ಅಂತ್ಯವೆಂದು ವಿಮರ್ಶಿಸಲಾಗುತ್ತಿದೆ. ನೆತನ್ಯಾಹುರವರು ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ.

Latest Indian news

Popular Stories

error: Content is protected !!