Malawi ದೇಶದ ಉಪಾಧ್ಯಕ್ಷ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನ ನಿಗೂಢ ನಾಪತ್ತೆ, ತೀವ್ರ ಶೋಧ

ಲಿಲಾಂಗ್ವೆ(ಮಲಾವಿ): ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್‌ ಚಿಲಿಮಾ ಹಾಗೂ ಇತರ ಒಂಬತ್ತು ಜನರನ್ನು ಕರೆದೊಯ್ಯುತ್ತಿದ್ದ ವಿಮಾನ ನಿಗದಿತ ಸಮಯವಾದ ಸೋಮವಾರ ಲ್ಯಾಂಡಿಂಗ್‌ ಆಗದೆ ನಾಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ದೃಶ್ಯಂ ಚಿತ್ರದ ನಟನ ವಿರುದ್ಧ ದೂರು ದಾಖಲು

ಮಲಾವಿ ರಾಜಧಾನಿ ಲಿಲಾಂಗ್ವೆನಿಂದ ರಕ್ಷಣಾ ಪಡೆಯ ವಿಮಾನದಲ್ಲಿ ಉಪಾಧ್ಯಕ್ಷ ಚಿಲಿಮಾ ಹಾಗೂ ಇತರ ಒಂಬತ್ತು ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು ಎಂದು ಸಿಎನ್‌ ಎನ್‌ ವರದಿ ಮಾಡಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಉತ್ತರ ಲಿಲಾಂಗ್ವೆನಿಂದ ಸುಮಾರು 380 ಕಿಲೋ ಮೀಟರ್‌ ದೂರದಲ್ಲಿರುವ ಮುಝುಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿಲಿಮಾ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡ್‌ ಆಗಬೇಕಿತ್ತು ಎಂದು ತಿಳಿಸಿದ್ದಾರೆ.

ವಿಮಾನ ರಾಡಾರ್‌ ಸಂಪರ್ಕಕ್ಕೆ ಸಿಗದೇ ಇದ್ದು, ನಾಪತ್ತೆಯಾಗಿರುವ ವಿಮಾನ ಪತ್ತೆಗಾಗಿ ಎಲ್ಲಾ ರೀತಿಯ ಶ್ರಮ ವಹಿಸಲಾಗುತ್ತಿದೆ ಎಂದು ಅಧ್ಯಕ್ಷರ ಕಚೇರಿಯ ಪ್ರಕಟನೆ ವಿವರಿಸಿದೆ. ಮಲಾವಿ ಉಪಾಧ್ಯಕ್ಷ ಚಿಲಿಮಾ ಹಾಗೂ ಇತರ ಪ್ರಯಾಣಿಕರ ಶೋಧಕ್ಕಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಏಜೆನ್ಸಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Latest Indian news

Popular Stories