Isreal attack | ಇಸ್ರೇಲ್ ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಡಮಾಸ್ಕಸ್‌: ಸಿರಿಯಾ ಮೇಲೆ ಇಸ್ರೇಲ್‌ ರವಿವಾರ ವೈಮಾನಿಕ ದಾಳಿ ನಡೆಸಿದೆ. ವಾಯವ್ಯ ಸಿರಿಯಾದ ಟಾರ್ಟಸ್‌ ನಗರದ ಶಸ್ತ್ರಾಗಾರಗಳನ್ನು ಗುರಿಯಾಗಿಸಿ ಈ ದಾಳಿ ನಡೆ­ದಿದ್ದು, ಇದರಿಂದ ಉಂಟಾದ ಸ್ಫೋಟದ ತೀವ್ರತೆಗೆ ರಿಕ್ಟರ್‌ ಮಾಪಕದಲ್ಲಿ ಸುಮಾರು 3.0 ತೀವ್ರತೆಯ ಭೂಕಂ­ಪವೂ ದಾಖಲಾಗಿದೆ.

2012ರ ಬಳಿಕ ಸಿರಿಯಾ ವಿರುದ್ಧ ಇಸ್ರೇಲ್‌ ನಡೆಸಿದ ಭಾರೀ ದಾಳಿ ಇದಾಗಿದೆ. ಸಿರಿಯಾ ಅಧ್ಯಕ್ಷ ಬಶರ್‌ ಅಸಾದ್‌ ದೇಶ ಬಿಟ್ಟು ಪಲಾಯನಗೈದ ಬಳಿಕ ಬಂಡುಕೋರರ ಗುಂಪುಗಳಿಗೆ ಶಸ್ತ್ರಾಸ್ತ್ರಗಳು ಲಭಿಸಬಾರದು ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್‌ ಹೇಳಿದೆ.

Latest Indian news

Popular Stories