ಪುಟಿನ್ ವಿರುದ್ಧ ದಂಗೆ ಎದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಮೃತ್ಯು

ಮಾಸ್ಕೊ: ಕಳೆದ ಜೂನ್ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವಿಫಲ ಕ್ಷಿಪ್ರಕ್ರಾಂತಿ ನಡೆಸಿದ್ದ ರಷ್ಯಾದ ಬಾಡಿಗೆ ಸೇನೆ ಮುಖ್ಯಸ್ಥ ಯೆವ್ಗಿನಿ ಪ್ರಿಗೋಝಿನ್ ಬುಧವಾರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಈ ದುರಂತದಲ್ಲಿ ಇನ್ನು 9 ಮಂದಿ ಜೀವ ಕಳೆದುಕೊಂಡಿದ್ದಾರೆ.

ಯೆವ್‍ಗಿನಿ ಪ್ರಯಾಣಿಸುತ್ತಿದ್ದ ಎಂಬ್ರೆಯರ್ ಎಕ್ಸಿಕ್ಯೂಟಿವ್ ಜೆಟ್ ಪತನಗೊಂಡಿದೆ ಎಂದು ಇಂಟರ್‍ನ್ಯಾಷನಲ್ ಏವಿಯೇಶನ್ ಎಚ್‍ಕ್ಯೂ ವೆಬ್‍ಸೈಟ್ ಹೇಳಿದೆ.

ತಾಂತ್ರಿಕ ವೈಫಲ್ಯದ ಹೊರತಾಗಿ ಸಿಬ್ಬಂದಿಯ ಪ್ರಮಾದದಿಂದ ಕಳೆದ 20 ವರ್ಷಗಳ ಸೇವೆಯಲ್ಲಿ ಸಂಭವಿಸಿದ ಮೊದಲ ದುರಂತ ಇದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.ಒಟ್ಟು ಹತ್ತು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನ ಮಾಸ್ಕೋದಿಂದ ಪೀಟರ್ಸ್ ಬರ್ಗ್ ಗೆ ಪ್ರಯಾಣ ಮಾಡುತ್ತಿತ್ತು.

ವ್ಲಾಡಿಮಿರ್‌ ಪುಟಿನ್ ನೇತೃತ್ವದ ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ರಷ್ಯಾ ಬೆಂಬ​ಲಿ​ತ ಖಾಸಗಿ ಸೇನಾಪಡೆ ವ್ಯಾಗ್ನರ್‌ ಗ್ರೂಪ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಪುಟಿನ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ಪ್ರಿಗೊಝಿನ್ ಅವರ ಪಡೆಗಳೇ ಮುಂದಾಳತ್ವ ವಹಿಸಿದ್ದವು. ಯೆವ್ಗೆನಿ ಪ್ರಿಗೋಜಿನ್ ಸಾಕಷ್ಟು ಪ್ರಭಾವ ಹೊಂದಿರುವ ರಷ್ಯಾದ ಶ್ರೀಮಂತ ಉದ್ಯಮಿ, ಮರ್ಸಿನರಿ ಮುಖ್ಯಸ್ಥನಾಗಿದ್ದ.


Latest Indian news

Popular Stories