ರಂಜಾನ್ 2024: ಆಸ್ಟ್ರೇಲಿಯಾ, ಬ್ರೂನಿ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್’ನಲ್ಲಿ ಉಪವಾಸದ ಮೊದಲ ದಿನ ಘೋಷಣೆ

ದುಬೈ: ನಾಳೆ ಸೋಮವಾರ ಶಾಬಾನ್ ಕೊನೆಯ ದಿನವಾಗಿದ್ದು, ಮಾರ್ಚ್ 12 ಮಂಗಳವಾರ ರಂಜಾನ್ ಮೊದಲ ದಿನ ಎಂದು ಆಸ್ಟ್ರೇಲಿಯಾ ಅಧಿಕೃತವಾಗಿ ಘೋಷಿಸಿದೆ.

ಆಸ್ಟ್ರೇಲಿಯಾದ ಗ್ರ್ಯಾಂಡ್ ಮುಫ್ತಿ, ಫೆಡರಲ್ ಕೌನ್ಸಿಲ್ ಆಫ್ ಇಮಾಮ್ಸ್, ಆಸ್ಟ್ರೇಲಿಯನ್ ಫತ್ವಾ ಕೌನ್ಸಿಲ್ ಮತ್ತು ಕೌನ್ಸಿಲ್ ಆಫ್ ಫತ್ವಾ ಮತ್ತು ಷರಿಯಾ ಆರ್ಬಿಟ್ರೇಶನ್‌ನ ಸಹಕಾರದೊಂದಿಗೆ ಸೋಮವಾರ ಶಾಬಾನ್ ಮುಗಿದು ಮಾರ್ಚ್ 12, ಮಂಗಳವಾರ ರಂಝಾನ್’ನ ಮೊದಲ ದಿನ ಎಂದು ಘೋಷಿಸಿದ್ದಾರೆ.

ಭೌಗೋಳಿಕವಾಗಿ ಆಸ್ಟ್ರೇಲಿಯಾವು ರಂಜಾನ್ ಆರಂಭವನ್ನು ಘೋಷಿಸುವ ಮೊದಲ ದೇಶವಾಗಿದೆ.

ಬ್ರೂನಿ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್ ಕೂಡ ರಂಝಾನ್ ತಿಂಗಳಿನ ಮೊದಲ ಉಪವಾಸವನ್ನು ಘೋಷಿಸಿ ಪ್ರಕಟಣೆ ಹೊರಡಿಸಿದೆ.

Latest Indian news

Popular Stories