ಬಾಂಗ್ಲಾದೇಶ ರಾಜಕೀಯ ಬಿಕ್ಕಟ್ಟು: ಧಾರ್ಮಿಕ ಅಲ್ಪಸಂಖ್ಯಾತ ಹಿಂದೂಗಳ ಮನೆ, ದೇವಸ್ಥಾನಗಳ ಬಳಿ ರಕ್ಷಣೆಗೆ ನಿಂತ ಇಸ್ಲಾಮಿ ಚಾತ್ರ್ ಶಿಬಿರ ಸಂಘಟನೆಯ ವಿದ್ಯಾರ್ಥಿಗಳು

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯ ನಂತರ ಇದೀಗ ಬಾಂಗ್ಲಾದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ದೇವಸ್ಥಾನ, ಮನೆಗಳನ್ನು ರಕ್ಷಿಸಲು ಕರೆ ನೀಡಲಾಗಿದೆ.

ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಇದೀಗ ಇಸ್ಲಾಮಿ ಚಾತ್ರ್ ಶಿಬಿರ ಎಂಬ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತ ಹಿಂದೂಗಳ ಮನೆ, ದೇವಸ್ಥಾನಗಳ ಕಾವಲು ಕಾಯುತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯ ನಂತರ ಪ್ರಮುಖ ವಿರೋಧ ಪಕ್ಷಗಳ ಸಲಹೆಯ‌ ಮೇರೆಗೆ ಬಾಂಗ್ಲಾದ ಸೇನೆ ಮಧ್ಯಂತರ ಸರಕಾರ ರಚಿಸಲು ಮುಂದಾಗಿದೆ. ಈತನ್ಮಧ್ಯೆ ಆದಷ್ಟು ಶೀಘ್ರ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಆರಂಭವಾಗಿವಾಗಿ ಪ್ರಜಾಸತ್ತಾತ್ಮಕ ಸರಕಾರ ಅಧಿಕಾರಕ್ಕೆ ಬರಬೇಕೆಂದು‌ ಹಲವು ರಾಷ್ಟ್ರದ ವಕ್ತಾರರು ಆಗ್ರಹಿಸಿದ್ದಾರೆ.

 

Latest Indian news

Popular Stories