ಟರ್ಕಿ: ಇಸ್ತಾಂಬುಲ್ ನೈಟ್ ಕ್ಲಬ್ ನಲ್ಲಿ ಭಾರಿ ಅಗ್ನಿ ದುರಂತ: 25 ಮಂದಿ ಸಾವು

ಸ್ತಾಂಬುಲ್: ಇಸ್ತಾಂಬುಲ್ ನೈಟ್‌ ಕ್ಲಬ್‌ ನಲ್ಲಿ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 7 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸರ್ಕಾರಿ ಅನಾಡೋಲು ಏಜೆನ್ಸಿ ವರದಿ ಮಾಡಿದೆ.

ನವೀಕರಣಕ್ಕಾಗಿ ಮುಚ್ಚಲಾದ ನೈಟ್‌ ಕ್ಲಬ್, ನಗರದ ಯುರೋಪಿಯನ್ ಭಾಗದಲ್ಲಿ ಬೆಸಿಕ್ಟಾಸ್ ಜಿಲ್ಲೆಯ 16 ಅಂತಸ್ತಿನ ವಸತಿ ಕಟ್ಟಡದ ನೆಲ ಮಹಡಿಯಲ್ಲಿದೆ. ಬೆಂಕಿಯನ್ನು ನಂದಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಹೇಳಿದ್ದಾರೆ.

ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ನಗರದ ಗವರ್ನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಲಬ್‌ನ ಮ್ಯಾನೇಜರ್‌ಗಳು ಮತ್ತು ನವೀಕರಣದ ಉಸ್ತುವಾರಿ ಹೊಂದಿರುವ ಒಬ್ಬ ವ್ಯಕ್ತಿ ಸೇರಿದಂತೆ ಐದು ಜನರನ್ನು ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ನ್ಯಾಯ ಸಚಿವ ಯಿಲ್ಮಾಜ್ ಟುಂಕ್ ಹೇಳಿದ್ದಾರೆ.

Latest Indian news

Popular Stories