ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಬಳಕೆ ಮಾಡುವುದರಲ್ಲಿ ತಪ್ಪೇನಿದೆ? – ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ

ಮಂಗಳೂರು, ಫೆಬ್ರವರಿ 9: ಸಂಸದ ಡಿಕೆ ಸುರೇಶ್ ಕುಮಾರ್ ಹೇಳಿಕೆಗೆ ಸಾಮಾನ್ಯ ರೀತಿ ಖಂಡನೆ ಮಾಡಿದರೆ ಅವರಿಗೆ ಅರ್ಥ ಆಗಲ್ಲ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿ ಮನವರಿಕೆ ಮಾಡಲು ಪ್ರಯತ್ನಿಸಿದ್ದೇನೆ. ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಅಭಿವೃದ್ಧಿ ಮಾಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಶಾಸಕ ಹರೀಶ್ ಪೂಂಜಾ (Harish Poonja) ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬುವುದನ್ನು ನಾನು ಸಮರ್ಥನೆ ಮಾಡುತ್ತೇನೆ. ಉತ್ತರ-ಭಾರತ ಅಂತ ವಿಭಜನೆ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದೂಗಳ ತೆರಿಗೆಯನ್ನು ಲೆಕ್ಕ ಹಾಕೋಕೆ ಕಷ್ಟವೇ ಇಲ್ಲ. ಪ್ರತಿಯೊಬ್ಬನ ಹೆಸರಿನ ಮುಂದೆ ಅವನ ಧರ್ಮವೂ ಉಲ್ಲೇಖವಾಗಿರುತ್ತದೆ. ಸಿಂಗಲ್ ಟ್ಯಾಪ್​ನಲ್ಲಿ ತೆರಿಗೆಯನ್ನು ವಿಭಾಗಿಸಬಹುದಾಗಿದೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ನಿನ್ನೆ ಶಾಸಕ ಹರೀಶ್ ಪೂಂಜಾ ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು. “ಈ ಆರ್ಥಿಕ ವರ್ಷದಿಂದ ಹಿಂದೂಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು”. “ಹಿಂದೂಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ”. ದೇಶದಲ್ಲಿರುವ ತೆರಿಗೆ ಸಂಗ್ರಹದಲ್ಲಿ ಹಿಂದೂಗಳ ಪಾಲು ಎಷ್ಟು. ಇದರಲ್ಲಿ ಹಿಂದೂಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು ಎಂದು ಪ್ರಶ್ನಿಸಿದ್ದರು.

Latest Indian news

Popular Stories