ಕರಗಿದ ಸಂಪತ್ತು, ವಿಶ್ವ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಅದಾನಿ

ದೆಹಲಿ: ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ಗೌತಮ್ ಅದಾನಿ ಕಳೆದ ೨೦ ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ೧೮.೮ ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ವಿಶ್ವದ ೨೦ ಶ್ರೀಮಂತರ ಪಟ್ಟಿಯಿಂದ ಅವರು ಹೊರ ಬಿದ್ದಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಗೌತಮ್ ಅದಾನಿ ಕೇವಲ ೨೦ ದಿನಗಳ ಅವಧಿಯಲ್ಲಿ ವಿಶ್ವದ ಟಾಪ್ ೨೦ ಶ್ರೀಮಂತರ ಪಟ್ಟಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಸದ್ಯ ೨೨ ಸ್ಥಾನ ತಲುಪಿದ್ದಾರೆ.
ಗೌತಮ್ ಅದಾನಿ ಗ್ರೂಪ್ ಷೇರುಗಳು ಜೂನ್ ೧೪ರಿಂದ ಸಾಕಷ್ಟು ಕುಸಿತಕ್ಕೆ ಒಳಗಾಗಿವೆ. ಇದೇ ವೇಳೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕಂಪನಿ ಷೇರುಗಳು ೭೦೦ ಮಿಲಿಯನ್ ಡಾಲರ್ ಏರಿಕೆಗೊಂಡಿವೆ.
ಅದಾನಿಯ ನಾಲ್ಕು ಪಟ್ಟಿಮಾಡಿದ ಕಂಪನಿಗಳಾದ ಅದಾನಿ ಎಂಟರ್ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿಯಲ್ಲಿ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ನಲ್ಲಿ ಮೂರು ವಿದೇಶಿ ನಿಧಿಗಳು ೪೩,೫೦೦ ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿAಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಅವುಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿ ಹರಿದಾಡಿತ್ತು. ಪರಿಣಾಮ ನಂತರದಲ್ಲಿ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿದ್ದವು.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅದಾನಿಯ ಸಂಪತ್ತು ಶುಕ್ರವಾರ ೫೬.೧ ಬಿಲಿಯನ್ ಆಗಿದ್ದು, ಜೂನ್ ೧೪ ರ ಆರಂಭದಲ್ಲಿ. ೭೪.೯ ಬಿಲಿಯನ್ ಡಾಲರ್‌ನಷ್ಟಿತ್ತು. ಈ ಕುಸಿತದಿಂದಾಗಿ, ಅದಾನಿ ಅಗ್ರ ೨೦ ಟಾಪ್ ಬಿಲಿಯನೇರ್‌ಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಏತನ್ಮಧ್ಯೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ತಮ್ಮ ಸಂಪತ್ತಿಗೆ ೭೦೦ ಮಿಲಿಯನ್ ಡಾಲರ್ ಸೇರಿಸಿದ್ದಾರೆ.

Latest Indian news

Popular Stories

error: Content is protected !!