ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಅರ್ಜಿ ಆಹ್ವಾನ

ಕಲಬುರಗಿ,ಜುಲೈ.೦೨.(ಕ.ವಾ.)-ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನೆ ಚಟುವಟಿಕೆಗಳಾದ ಡೈರಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾಂಸ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನಿಡಲಾಗುತ್ತಿದ್ದು, ಇದಕ್ಕಾಗಿ ವಿವಿಧ ವರ್ಗಗಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ

ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪಶುಸಂಗೋಪನೆ ವಲಯದಲ್ಲಿ, ಪಶುಪಾಲನಾ ಮೂಲಭೂತ ಸೌಕರ್ಯ ನಿಧಿ ಯೋಜನೆ (Ahidf
fund) ಪ್ರಾರಂಭಿಸಿದ್ದು, ಜಿಲ್ಲೆಗೆ ೩೦ ಗುರಿ ನಿಗದಿಪಡಿಸಲಾಗಿದ್ದು, ಪಿ.ಪಿ.ಪಿ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಈ ಮೇಲ್ಕಂಡ ಘಟಕಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಅವಕಾಶವಿದ್ದು, ರಾಷ್ಟಿçÃಕೃತ ಬ್ಯಾಂಕಗಳ ಮೂಲಕ ಸಾಲ ಸೌಲಭ್ಯ ಇರುತ್ತದೆ.
ಅರ್ಹ ಫಲಾನುಭವಿಗಳು https://ahidf.udyamimitra.in/ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಶಾಖೆಗೆ ಅಥವಾ ಸಂಬAಧಪಟ್ಟ ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Latest Indian news

Popular Stories

error: Content is protected !!