ಅಜೀಮ್ ಪ್ರೇಂಜಿ ಫೌಂಡೇಶನ್‌ದಿAದ ಬೀದರ ಮತ್ತು ಕಲಬುರಗಿ ಜಿಲ್ಲೆಯ ೧೭,೫೦೦ ಬಡ ಕುಟುಂಬಗಳಿಗೆ ಆಹಾರಧಾನ್ಯ ವಿತರಣೆಗೆ ಚಾಲನೆ

ಬೀದರ, ಜೂನ್. ೦೬ ಃ ಅಜೀಮ್ ಪ್ರೇಂಜಿ ಫೌಂಡೇಶನ್ ವತಿಯಿಂದ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಬಡ ಕುಟುಂಬಗಳಿಗೆ ಆಹಾರಧಾನ್ಯ ನೀಡುವ ಯೋಜನೆಗೆ ಇಂದು ದಿನಾಂಕ ೬ ರಂದು ನಗರದ ಸೆಂಟ್ ಜೋಸೆಫ್ ಕಾಲೇಜಿನ ಆವರಣದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಝಹೀರಾ ನಸೀಮ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತ, ಕೋವಿಡ್-೧೯ ಕರೋನಾ ವೈರಸ್ ೨ ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಕೈಗೆ ಕೂಲಿ ಕೆಲಸವಿಲ್ಲದೇ ತೀವ್ರ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಅಜೀಮ್ ಪ್ರೇಮಜಿ ಫೌಂಡೇಷನ್ ವತಿಯಿಂದ ಆಹಾರಧಾನ್ಯ ವಿತರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸAಕಷ್ಟದ ಸಮಯದಲ್ಲಿ ಅರ್ಬೀಟ್ ಮತ್ತು ಶಾಹೀನ್ ಸಂಸ್ಥೆ ಸೇರಿ ಒಟ್ಟು ೪೭ ಎನ್.ಜಿ.ಓ.ಗಳು ಈ ಕಾರ್ಯಕ್ಕೆ ಕೈಜೋಡಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಬೀದರ ಜಿಲ್ಲೆಯ ಎನ್.ಜಿ.ಓ.ಗಳು ಕೋವಿಡ್-೧೯ ಕುರಿತು ಜನಜಾಗೃತಿ ಮೂಡಿಸುತ್ತಿರುವ ಕಾರ್ಯ ಸಹ ಪ್ರಶಂಸನೀಯವಾಗಿದೆ. ಬೀದರ ಜಿಲ್ಲಾಡಳಿತ ಕೋವಿಡ್-೧೯ ಕರೋನಾ ವೈರಸ್ ಹೋಗಲಾಡಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಜಿಲ್ಲೆಯ ಎನ್.ಜಿ.ಓ.ಗಳು ಕೈ ಜೋಡಿಸಿದ್ದರಿಂದ ಜಿಲ್ಲಾಡಳಿತಕ್ಕೆ ಅನೆಬಲ ಬಂದಿದೆ ಎಂದರು.
ಈ ಆಹಾರಧಾನ್ಯಗಳನ್ನು ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಆರ್ಬಿಟ್ ಸಂಸ್ಥೆ, ಶಾಹೀನ್ ಕಾಲೇಜು ಮತ್ತು ಇತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವಿತರಿಸಲಾಗುವುದು. ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕಿಟ್‌ಗಳನ್ನು ಸುಮಾರು ೧೭,೫೦೦ ಬಡ ಕುಟುಂಬಗಳಿಗೆ ವಿತರಿಸಲಾಗುವುದು. ೨೦೦ಕ್ಕೂ ಹೆಚ್ಚು ಹಳ್ಳಿಗಳ ಬಡ ಕುಟುಂಬಗಳಿಗೆ ಇದನ್ನು ಹಂಚಲಾಗುವುದು. ಒಟ್ಟು ೪೭ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ವಿತರಣೆ ನಡೆಯಲಿದೆ.
ಅಜೀಮ್ ಪ್ರೇಂಜಿ ಫೌಂಡೇಶನ್‌ದಿAದ ಆಹಾರಧಾನ್ಯ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಡಾ. ಅಬ್ದುಲ್ ಖದೀರ್ ಮತ್ತು ಆರ್ಬಿಟ್ ಸಂಸ್ಥೆಯ ಫಾಧರ್ ಅನಿಲ್ ಕ್ರಾಸ್ತಾ, ಫಾಧರ್ ವಿಕ್ಟರ್ ದಾಸ್ ಮತ್ತು ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ವಿಲ್ಸನ್ ಫೆರ್ನಾಂಡಿಸ್ ಅವರು ಉಪಸ್ಥಿತರಿದ್ದರು.

Latest Indian news

Popular Stories