ಸೆಕ್ಯೂರಿಟಿ ಏಜೆನ್ಸಿಗಳಿಂದ ಅರ್ಜಿ ಅಹ್ವಾನ

ಬಳ್ಳಾರಿ, ಜೂ.15(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮಹಿಳೆಯರ ಸಂರಕ್ಷಣಾ ಕಾಯ್ದೆ– 2005 ಯೋಜನೆಯಡಿ, ಒಬ್ಬ ಕಂಪ್ಯೂಟರ್ ಆಪರೇಟರ್ ಹಾಗೂ ಒಬ್ಬ ಮೆಸೆಂಜರ್ ಇವರ 2 ಹುದ್ದೆಗಳಿಗೆ ಬಾಹ್ಯ ಮೂಲದ ಸೇವೆ ಪಡೆಯಲು ಸ್ಥಳೀಯ ಸೆಕ್ಯೂರಿಟಿ ಏಜೆನ್ಸಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಆಪರೇಟರ್ ಸ್ಥಿರಮಾಸಿಕ (Fixed Salary) ಗೌರವಧನ ರೂ. 11ಸಾವಿರ ಹಾಗೂ ಮೆಸೆಂಜರ್ ಸ್ಥಿರಮಾಸಿಕ (Fixed Salary) ಗೌರವ ಧನ ರೂ.8ಸಾವಿರಗಳಿದ್ದು, ಇವರ ಸೇವೆಗೆ ಸರ್ವಿಸ್ ಚಾರ್ಜ್ (Service Charge) ಮಾತ್ರ ದರಪಟ್ಟಿಯಲ್ಲಿ ನಮೂದಿಸಬೇಕು. ಅರ್ಹ ಸೆಕ್ಯೂರಿಟಿ ಏಜೆನ್ಸಿಯವರು ತಮ್ಮ ದರಪಟ್ಟಿಗಳನ್ನು ಮುಚ್ಚಿದ ದ್ವಿ ಲಕೋಟೆಗಳಲ್ಲಿ (ಆರ್ಥಿಕ ಮತ್ತು ತಾಂತ್ರಿಕ ಲಕೋಟೆ) ಜೂ.19 ಅಪರಾಹ್ನ 12ಗಂಟೆಯೊಳಗಾಗಿ ಸಲ್ಲಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿಯ ನಮೂನೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ: 08392-266219 ಗೆ ಸಂಪರ್ಕಿಸಬಹುದು.

Latest Indian news

Popular Stories

error: Content is protected !!