ಲಾಕ್‍ಡೌನ್ ಅವಧಿಯಲ್ಲಿ ಮಹಿಳೆಯರಲ್ಲಿ ಗರ್ಭಧಾರಣೆ ಹೆಚ್ಚಳ:ವಿಜಯಲಕ್ಷ್ಮೀ

ಬಳ್ಳಾರಿ, ಜು.12(ಕನಾಟಕ ವಾರ್ತೆ): ಕೊರೊನಾ ಸೊಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಧಿಸಲಾಗಿದ್ದು, ಈ ಅವಧಿಯಲ್ಲಿ ಜಗತ್ತಿನಾದ್ಯಂತ ಮಹಿಳೆಯರು ಗರ್ಭಧರಿಸುವುದು ಹೆಚ್ಚಾಗಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಶಾಖಾ ವ್ಯವಸ್ಥಾಪಕಿ ವಿಜಯಲಕ್ಷ್ಮೀ ಅವರು ತಿಳಿಸಿದರು.
ವಿಶ್ವಜನಸಂಖ್ಯೆ ದಿನಾಚರಣೆಯ ಅಂಗವಾಗಿ ಎಫ್.ಪಿ.ಎ.ಐ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಸಂಖ್ಯೆ ಸಮಸ್ಯೆಗಳು, ಕುಟುಂಬ ಯೋಜನೆ, ಲಿಂಗಸಮಾನತೆ ಮತ್ತು ಪರಿಸರ ಪರಿಣಾಮಗಳು, ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಅವರು ವಿವರಿಸಿದರು.
ಈ ವರ್ಷ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಮಹಿಳೆಯರು ಗರ್ಭಧರಿಸುವುದನ್ನು ಕಾಣಬಹುದು. ಇತ್ತೀಚಿನ ಸಂಶೋಧನೆಯಂತೆ ಲಾಕ್‍ಡೌನ್ ಮುಂದುವರಿದರೆ ಆರೋಗ್ಯ ಸೇವೆಗಳಿಗೆ ದೊಡ್ಡ ಅಡ್ಡಿ ಉಂಟಾಗುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ಮಹಿಳೆಯರಿಗೆ ಆಧುನಿಕ ಗರ್ಭನಿರೋದಕಗಳು ಸಿಗದೆ ಅನಪೇಕ್ಷೀತ ಗರ್ಭಧರಿಸುವುದು ಹೆಚ್ಚಳವಾಗುವುದನ್ನ ಕಾಣುತ್ತೇವೆ. ಇದು 7 ಮಿಲಿಯನ್ ಅನಪೇಕ್ಷಿತ ಗರ್ಭಧಾರಣೆಗೆ ಕಾರಣವಾಗುತ್ತದೆ. ಇದಲ್ಲದೆ ಲಿಂಗ ಆಧಾರಿತ ಹಿಂಸೆ, ಸ್ತ್ರೀಯರ ಮೇಲೆ ದೌರ್ಜನ್ಯ ಮತ್ತು ಬಾಲ್ಯವಿವಾಹಗಳು ಹೆಚ್ಚಾಗುವುದನ್ನ ಕಾಣಬಹುದು ಎಂದು ಅವರು ಹೇಳಿದರು.
ವಿಜಯಲಕ್ಷ್ಮೀರಾವ್ ಅವರು ಪ್ರಾರ್ಥಿಸಿ ಸ್ವಾಗತಿಸಿದರು, ಕಾರ್ಯಕ್ರಮದ ಅಧಿಕಾರಿ ಪವನ್ ಅವರು ವಂದನಾರ್ಪಣೆ ಮಾಡಿದರು.

Latest Indian news

Popular Stories

error: Content is protected !!