ಬುಡಾ ನಿವೇಶನಗಳ ಇ-ಹರಾಜು ಜೂ.30ರಂದು

ಬಳ್ಳಾರಿ,ಜೂ.25 (ಕರ್ನಾಟಕ ವಾರ್ತೆ): ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 20 ವಾಸಯೋಗ್ಯ,ಮೂಲೆ/ಬಿಡಿ ನಿವೇಶನಗಳು,ವಾಣಿಜ್ಯ ಖಾಲಿ ಕಟ್ಟಡಗಳ ಇ-ಹರಾಜು ಪ್ರಕ್ರಿಯೆಯು ಜೂ.30ರಂದು ನಡೆಯಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಧಿಕಾರದಿಂದ ನಿರ್ಮಿಸಿದ ಬಡಾವಣೆಗಳಾದ ರಾಘವೇಂದ್ರ ಕಾಲೋನಿ 2ನೇ ಹಂತ-13 ವಾಸಯೋಗ್ಯ ನಿವೇಶನಗಳು, ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 02 ವಾಸಯೋಗ್ಯ ನಿವೇಶನಗಳು, ಕುವೆಂಪು ನಗರದಲ್ಲಿ 02 ವಾಣಿಜ್ಯ ನಿವೇಶನಗಳು ಹಾಗೂ ಶ್ರೀ ಲಾಲ್‍ಬಹದ್ದೂರ್ ಶಾಸ್ತ್ರೀ ವಾಣಿಜ್ಯ ಸಂಕೀರ್ಣದಲ್ಲಿ 03 ಖಾಲಿ ಜಾಗಗಳು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಇ-ಹರಾಜಿನ ಪ್ರಕ್ರಿಯೆ ಮತ್ತು ಇ.ಎಂ.ಡಿ ಹಣವನ್ನು ಪಾವತಿಸುವ ಪ್ರಕ್ರಿಯೆ ಈಗಾಗಲೇ ಜೂ.16ರಿಂದ ಪ್ರಾರಂಭಗೊಂಡಿದ್ದು, ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಪ್ರೋಸಸಿಂಗ್ ಶುಲ್ಕ ಮತ್ತು ಇ.ಎಂ.ಡಿಯನ್ನು ಜೂ.30ರಂದು ಮಧ್ಯಾಹ್ನ 12.30 ಗಂಟೆಯೊಳಗೆ ಪಾವತಿಸಬೇಕು. ಇ-ಹರಾಜಿನಲ್ಲಿ ಬಿಡ್ ಮಾಡುವ ಸಮಯವು ಜೂ.30ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ಗಂಟೆವರೆಗೆ ಇರಲಿದೆ(ಡೆಲ್ಟಾ ಟೈಮ್ 0.05 ನಿಮಿಷ). ಬಿಡ್ ಆಗದೆ ಇರುವವರಿಗೆ ಇ.ಎಂ.ಡಿ ಮೊತ್ತದ ಹಣವನ್ನು 45ದಿನಗಳ ನಂತರ ಇ-ಪ್ರೊಕ್ಯೂರ್‍ಮೆಂಟ್ ಸೆಲ್,ಕರ್ನಾಟಕ ಸರ್ಕಾರ ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆ ಸಂಖ್ಯೆ ಮತ್ತು ಹೆಸರುಗಳನ್ನು ತಪ್ಪಾಗಿ ನಮೂದಿಸಿದಲ್ಲಿ ಪ್ರಾಧಿಕಾರ ಜವಾಬ್ದಾರಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಿವೇಶನ ಪಡೆಯಲು ಇಚ್ಚೆಯುಳ್ಳವರು ಇ-ಪ್ರೊಕ್ಯೂರ್‍ಮೆಂಟ್ ವೆಬ್‍ಸೈಟ್ http://www.eproc.karnataka.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವೆಬ್‍ಸೈಟ್ www.bellary.uda.gov.in. ಅಥವಾ ದೂ:08392-273731/278651 ಸಂಪರ್ಕಿಸಬಹುದು.

Latest Indian news

Popular Stories