ಆಶ್ರಿತ ರೋಗಗಳ ತಡೆಗಟ್ಟುವಿಕೆ ಕುರಿತು ತೋರಣಗಲ್ಲುವಿನಲ್ಲಿ ಜನಾಂದೋಲನ ಜಿಡಿಸಿಎಲ್ ಕಾರ್ಮಿಕರ ವಸತಿ ಪ್ರದೇಶದ ಕಾರ್ಮಿಕರ ರಕ್ತಲೇಪನ ಸಂಗ್ರಹ

ಬಳ್ಳಾರಿ,ಜು.09(ಕರ್ನಾಟಕ ವಾರ್ತೆ): ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿರ್ಮೂಲನಾ ಕಾರ್ಯಾಲಯ ತಂಡ, ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸಮುದಾಯಕ್ಕೆ ರೋಗ ತಡೆಗಟ್ಟುವ ಕುರಿತು ಜನಾಂದೋಲನ ಕಾರ್ಯಕ್ರಮ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಾರ್ಖಾನೆ ಹತ್ತಿರದ ವಲಸೆ ಕಾರ್ಮಿಕರ ಪ್ರದೇಶವಾದ GDCL ಕಾರ್ಮಿಕರ ವಸತಿ ಪ್ರದೇಶದಲ್ಲಿ ಗುರುವಾರ ಜರುಗಿತು.
ಸೊಳ್ಳೆಗಳಿಂದ ಹರಡುವ ಕಾಯಿಲೆಗಳಲ್ಲಿ ಅನೇಕಾಲು ರೋಗ ಅತ್ಯಂತ ಗಂಭೀರವಾದದ್ದು. ಸೋಂಕಿತ ಕ್ಯೂಲೇಕ್ಸ್ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಕಾಯಿಲೆಯಾಗಿದ್ದು, ಇದು ಶಾಶ್ವತವಾಗಿ ವ್ಯಕ್ತಿಯನ್ನು ಖಾಯಿಲೆಯುಳ್ಳವನನ್ನಾಗಿ ಮಾಡುವಂತ ಕಾಯಿಲೆಯಾಗಿದೆ.
ರೋಗವನ್ನು ಪತ್ತೆ ಹಚ್ಚಲು ರಾತ್ರಿ ವೇಳೆ ಸಾರ್ವಜನಿಕರಿಂದ ರಕ್ತ ಲೇಪನ ಸಂಗ್ರಹವನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿರ್ಮೂಲನಾ ಕಾರ್ಯಾಲಯ ತಂಡ,ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Latest Indian news

Popular Stories

error: Content is protected !!