ರಾಜ್ಯ ಉನ್ನತ ಪುಸ್ತಕ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳ ಆಹ್ವಾನ

ಬಳ್ಳಾರಿ, ಜು.05 (ಕರ್ನಾಟಕ ವಾರ್ತೆ): ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಯೋಜನೆಯಡಿಯಲ್ಲಿ 2021ನೇ ಸಾಲಿನ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಸಮಿತಿ ಆಯ್ಕೆಗಾಗಿ ಸಲ್ಲಿಸಲು ಕಲೆ, ಸಾಹಿತ್ಯ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ ಮತ್ತು ಮಕ್ಕಳ ಸಾಹಿತ್ಯ ಹಾಗೂ ಇತರೆ ವಿಷಯಗಳ ಕನ್ನಡ, ಆಂಗ್ಲ, ಇತರೆ ಭಾರತೀಯ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕರು/ಪ್ರಕಾಶಕರು/ ಸಂಸ್ಥೆಗಳಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2021ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜು.30 ರೊಳಗೆ ಕಾಪಿರೈಟ್ ಮಾಡಿಸಿರತಕ್ಕದ್ದು, ಕಾಫಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು ಹಾಗೂ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಒದಗಿಸಲು ಅನುಕೂಲವಾಗುವಂತೆ ಆಸಕ್ತಿಯುಳ್ಳ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ತಮ್ಮ ಅನುಮತಿ ಪತ್ರದೊಂದಿಗೆ ಸದರಿ ಪುಸ್ತಕದ ಸಾಫ್ಟ್ ಕಾಫಿಯನ್ನು ಸಿ.ಡಿ ರೂಪದಲ್ಲಿ ( ನೋಂದಣಿ ಪತ್ರದ ಪ್ರತಿಯೊಂದಿಗೆ ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ. ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4 ನೇ ಮಹಡಿ, ಡಾ:ಅಂಬೇಡ್ಕರ್ ವೀಧಿ, ಬೆಂಗಳೂರು -560001 ಇಲ್ಲಿಗೆ ಜು.31 ರಂದು ಸಂಜೆ 5.00 ಗಂಟೆಯೊಳಗೆ ಸಲ್ಲಿಸುವುದು. ತದನಂತರ ಬಂದ ಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಅರ್ಜಿ ನಮೂನೆ ಮತ್ತು ನಿಬಂಧನೆಗಳ ಮಾಹಿತಿಗಾಗಿ ಇಲಾಖಾ ಅಂತರ್ಜಾಲ www.dpl.karnataka.gov.in ಹಾಗೂ ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೆಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-22864990, 22867358 ಅಥವಾ ಕಚೇರಿಯ ದೂ.ಸಂ 08392-274113 ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

Latest Indian news

Popular Stories

error: Content is protected !!