ಜೀತೂ ಬಳ್ಳಾರಿ ಯುವಸಂಘ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಅಲೆಮಾರಿ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ

ಬಳ್ಳಾರಿ,ಮೇ29(ಕರ್ನಾಟಕ ವಾರ್ತೆ): ಜೀತೂ ಬಳ್ಳಾರಿ ಯುವಸಂಘವು ದಿನಸಿ ಕಿಟ್‍ಗಳನ್ನು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಗೆ ದೇಣಿಗೆ ನೀಡಿದ್ದು, ರೆಡ್‍ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ನಗರದ ಕಾಕರ್ಲತೋಟ ಬಳಿ ಇರುವ ಹನುಮಾನ್ ನಗರದ ಅಲೆಮಾರಿ ಕುಟುಂಬಗಳಿಗೆ 100 ರೇಷನ್ ಕಿಟ್‍ಗಳನ್ನು ಶುಕ್ರವಾರ ವಿತರಿಸಿದರು.
ಈ ಸಮಯದಲ್ಲಿ ಸಹಾಯಕ ಆಯುಕ್ತರು ರಮೇಶ್ ಕೋನರೆಡ್ಡಿ ಅವರು ಮಾತನಾಡಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಜಾರಿಮಾಡಿದ್ದು, ಇದರಿಂದ ಬಡಜನರಿಗೆ ತೊಂದರೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದುಡಿದು ತಿನ್ನುವ ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡುತ್ತಿರುವ ರೆಡ್‍ಕ್ರಾಸ್ ಮತ್ತು ಜೀತೂ ಯುವಸಂಘದ ಕೆಲಸ ಶ್ಲಾಘನೀಯ ಎಂದರು.
ಒಂದು ದಿನದÀ ಮುಂಚೆಯೇ ಜೀತೂ ಸದಸ್ಯರು ಅಲೆಮಾರಿ ಜನರ ಕುಟುಂಬಗಳನ್ನು ವೀಕ್ಷಣೆ ಮಾಡಿ ಅಲ್ಲಿನ ಬಡ ಕುಟುಂಬಗಳನ್ನು ಗುರುತಿಸಿ ಟೋಕನ್ ನೀಡಿದ್ದರು. ಆ ಕುಟುಂಬಗಳಿಗೆ 5ಕೆಜಿ ಅಕ್ಕಿ, 5ಕೆಜಿ ಗೋದಿ ಹಿಟ್ಟು, 1ಕೆಜಿ ತೋಗರಿಬೇಳೆ, 1ಕೆಜಿ ಸಕ್ಕರೆ, 1ಲೀಟರ್ ಅಡುಗೆಎಣ್ಣೆ, 1ಕೆಜಿ ರವೆ, 1ಕೆಜಿ ಉಪ್ಪು, 200ಗ್ರಾಂ ಕಾರದಪುಡಿ ಸೇರಿದಂತೆ ದಿನಸಿ ಕಿಟ್ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಡಿವೈಎಸ್‍ಪಿ ರಮೇಶ್ ಕುಮಾರ್, ಬಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಷಕೀಬ್, ಜೀತೂ ಯುವ ಸಂಘದ ಅಧ್ಯಕ್ಷರಾದ ಮೇವುಲ್‍ಜೈನ್, 5ನೇ ವಾರ್ಡ್‍ನ ಕಾರ್ಪೋರೇಟರ್ ರಾಜಶೇಕರ್, ಜೀತೂ ಯುವ ಸಂಘದ ಸದಸ್ಯರಾದ ಅಭಿಶೇಕ್, ತರುಣ್, ರೆಡ್ ಕ್ರಾಸ್ ಸರ್ವ ಸ್ವಯಂ ಸೇವಕರ ತಂಡದ ಸದಸ್ಯರಾದ ಭರತ್‍ಜೈನ್, ಪ್ರದೀಪ್, ಶೇತಾ, ಅಶೋಕ್ ಜೈನ್, ಮೈನೂದ್ದೀನ್ ಹಾಗೂ ಭಾರತ ಸೇವಾದಳ ಇಲಾಖೆ ಬಾರಿಕರ ಗಣೇಶ್ ಹಾಗೂ ಸ್ಥಳೀಯ ಮುಖಂಡರು ಇದ್ದರು.

Latest Indian news

Popular Stories

error: Content is protected !!