ಟಿಇಟಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜು.14(ಕರ್ನಾಟಕ ವಾರ್ತೆ):ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ 2020-21ನೇ ಸಾಲಿನ ಟಿ.ಇ.ಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಡಯಟ್ ಪ್ರಾಚಾರ್ಯರಾದ ಎ.ಹನುಮಕ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಬಿ.ಇಡಿ ಮತ್ತು ಡಿ.ಇಡಿ/ಡಿ.ಇ.ಎಲ್.ಇಡಿ ಪಾಸಾದ/ಅನುತ್ತೀರ್ಣರಾದ ಮತ್ತು ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಆ.22ರಂದು ನಡೆಯುವ ಟಿ.ಇ.ಟಿ ಪರೀಕ್ಷೆಗೆ ನೊಂದಣಿಯಾದ ಕನ್ನಡ ಮತ್ತು ಉರ್ದು ಮಾಧ್ಯಮದ ಅಭ್ಯರ್ಥಿಗಳು ಆನ್‍ಲೈನ್ ಗೂಗಲ್ ಲಿಂಕ್ ಮೂಲಕ ತರಬೇತಿಗೆ ನೊಂದಣಿ ಮಾಡಿಕೊಳ್ಳಬಹುದು.
ಗೂಗಲ್ ಲಿಂಕ್ ಅನ್ನು ಬಳ್ಳಾರಿ ಜಿಲ್ಲೆಯ ಎಲ್ಲಾ ಬ್ಲಾಕ್ ನೋಡೆಲ್ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಬಿ.ಇ.ಓ/ಬಿ.ಆರ್.ಸಿ ಕಚೇರಿಗೆ ಸಂಪರ್ಕಿಸಿ ಲಿಂಕ್ ಪಡೆದು ನೊಂದಣಿ ಮಾಡಿಕೊಳ್ಳಬಹುದು.
ನೊಂದಣಿಯಾದ ಅಭ್ಯರ್ಥಿಗಳಿಗೆ ಮಾತ್ರ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ತರಬೇತಿಯ ದಿನಾಂಕ ಪ್ರಕಟಿಸಲಾಗುವುದು. ಮಾಹಿತಿಗಾಗಿ ವೆಬ್‍ಸೈಟ್ https://forms.gle/pbiLGddbw7RLEj2j7 ವೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಡಯಟ್‍ನ ಹಿರಿಯ ಉಪನ್ಯಾಸಕರು ಹಾಗೂ ಟಿ.ಇ.ಟಿ ನೋಡೆಲ್ ಅಧಿಕಾರಿ ಬಸವರಾಜ್ ಎಂ.ಶಿವಪೂರ ಅವರ ಮೊ.ಸಂ:9482690221 ಗೆ ಸಂಪರ್ಕಿಸಬಹುದು.

Latest Indian news

Popular Stories

error: Content is protected !!